ಕಾಂಗ್ರೆಸನವರಿಗೆ ರಾಜ್ಯದಲ್ಲಿ ಸ್ಥಳವೇ ಇಲ್ಲದಂತೆ ಆಗಿದೆ ಬೆಳಗಾವಿಯಲ್ಲಿ: ಕೇಂದ್ರ ಸಚಿವ ಪ್ರಹ್ಲಾದ ಜೋಷಿ.

  • 23 Dec 2023 , 7:50 AM
  • Belagavi
  • 92

ಬೆಳಗಾವಿ : ಕಾಂಗ್ರೆಸ್ ಗೆ ಒಂದು ಸ್ಟ್ಯಾಂಡವೆ ಇಲ್ಲ ಆದ್ದರಿಂದ ಅದು ಬಸ್ ಸ್ಟ್ಯಾಂಡ್ ಆಗಿದೆ. ಅದಕ್ಕೆ ಚುನಾವಣೆ ಎದುರಿಸಲೂ ಯಾವುದೇ ವಿಷಯಗಳಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅವರು ವ್ಯಂಗ್ಯ ಮಾಡಿದ್ದಾರೆ‌‌ ರಾಜ್ಯದಲ್ಲಿ ನಾಯಕತ್ವ ಬದಲಾವಣಯೆ ಪ್ರಶ್ನೆಯೇ ಇಲ್ಲ ಯಡಿಯೂರಪ್ಪನವರೇ ಸಿಎಂ ‌ಆಗಿ ಮುಂದುವರೆಯುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಲಾದ ಜೋಷಿ ಹೇಳಿದರು.

ಬೆಳಗಾವಿ ಖಾಸಗಿ ಹೋಟೆಲ ಒಂದರಲ್ಲಿ ನಡೆದ ಬೆಳಗಾವಿ ಲೋಕಸಭೆ ಉಪಚುನಾವಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆಯ ಕುರಿತು ಮಾದ್ಯಮಗಳ ಜೊತೆ ಅವರು ಮಾತನಾಡಿದ ಅವರು ರಾಜ್ಯದಲ್ಲಿ ನಡೆಯಲಿರುವ ಮೂರು ಉಪ ಚುನಾವಣೆಯಲ್ಲಿ ಬಿಜೆಪಿಗೆ ದಾಖಲೆ ಅಂತರದಲ್ಲಿ ಜಯ ಸಿಗಲಿದೆ. ಅದೇ ರೀತಿ ದೇಶದಲ್ಲಿ ನಡೆದಿರುವ ಐದು ರಾಜ್ಯಗಳ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ ಅಧಿಕಾರದ ಚುಕ್ಕಾಣೆ ಹಿಡಿಯಲಿದೆ. ಪಶ್ಚಿಮ ಬಂಗಾಳದಲ್ಲಿ ಪ್ರಥಮ ಬಾರಿಗೆ ಬಿಜೆಪಿ ವಿಜಯ ದಾಖಲಿಸಲಿದೆ‌.

ಪುದುಚರಿಯಲ್ಲಿ ಎನ್ ಡಿ ಎ ಮೈತ್ರಿಕೋಟ ಸರ್ಕಾರ ರಚನೆ ಮಾಡಲಿದೆ.‌ ಅಸ್ಸಾಂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ, ಕೆರಳ ಮತ್ತು ತಮಿಳುನಾಡಿನಲ್ಲ,ಬೆಂಗಾಳದಲ್ಲಿ ದಿದಿ ಪಾರ್ಟಿಗೆ ಬರಗಾಲ ಬಂದಿದೆ. ಜನ ಗೂಳೆ ಹೋದ ಹಾಗೆ ದಿದಿ ಸರ್ಕಾರ ಪತನ ಆಗಲಿದೆ ಎಂದು ತಿಳಿಸಿದರು.‌

ಬೆಳಗಾವಿ ಲೋಕಸಭೆಯಲ್ಲಿ ಮಂಗಳಾ ಅಂಗಡಿ ಅವರು ದಾಖಲೆಯ ವಿಜಯ ಸಾಧಿಸಲಿದ್ದಾರೆ. ಕೇಂದ್ರದಲ್ಲಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕೆಲಸದಿಂದ ಜನ ಪ್ರಭಾವಿತರಾಗಿದ್ದಾರೆ.‌ಅದೇ ರೀತಿ ರಾಜ್ಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅನೇಕ ಅಭಿವೃದ್ಧಿ ಕೆಲಸ ಮಾಡಿದೆ ಅದೇ ವಿಷಯಗಳನ್ನು ಮುಂದೆ ಇಟ್ಟುಕೊಂಡು ಉಪ ಚುನಾವಣೆ ಮಾಡಲಿದ್ದೇವೆ ಎಂದು ಹೇಳಿದರು.

Read All News