ಐದು ಲಕ್ಷ ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲವು ಸಾಧಿಸಲಿದ್ದಾರೆ: ತೆಂಗಿನಕಾಯಿ

  • 15 Jan 2024 , 2:09 AM
  • Belagavi
  • 136

ಬೆಳಗಾವಿ: ಲೊಕಸಭಾ ಉಪಚುನಾವಣೆಯಲ್ಲಿ ಮಂಗಲಾ ಸುರೇಶ ಅಂಗಡಿಯವರ ಪರ ಪ್ರಚಾರಕ್ಕೆ ಸಹಸ್ರ ಸಂಖ್ಯೆಯಲ್ಲಿ ಮಹಿಳಾ ಮನಿಗಳು ಸನ್ನದ್ದರಾಗಿದ್ದು 5ಲಕ್ಷ ಮತಗಳ ಅಂತರದಿಂದ ಬಿಜೆಪಿ ಗೆಲವು ಸಾಧಿಸಲಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಪಕ್ಷದ ಚುನಾವಣಾ ಉಸ್ತುವಾರಿ ಮಹೇಶ ಟೆಂಗಿನಕಾಯಿ ಹೇಳಿದರು.

ಬುಧವಾರ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಮಹಿಳಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಬೆಳಗಾವಿ ಲೊಕಸಭೆಯ ಉಪಚುನಾವಣೆಯಲ್ಲಿ ಮಹಿಳಾ ಅಭ್ಯರ್ಥಿ ಪರವಾಗಿ ಸಹಸ್ರಾರು ಮಹಿಳೆಯರು ಅವರ ಪರ ಸ್ವಯಂಸ್ಪೂರ್ತಿಯಾಗಿ ಮನೆ ಮನೆಗೆ ತೆರಳಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಾಧನೆ ತಿಳಿಸಿ ಮತ ಪಡೆಯಲಿದ್ದಾರೆ.

ಕೇಂದ್ರ ಸರ್ಕಾರ ಜನಧನ್ ಖಾತೆದಾರ ಮಹಿಳೆಯರಿಗೆ ಕೊವಿಡ್ ಸಂದರ್ಭದಲ್ಲಿ ಹಣ ಹಾಕಿರುವದು, ಮುಸ್ಲಿಂ ಮಹಿಳೆಯರಿಗೆ ಸ್ವಾಭಿಮಾನದಿಂದಿರಲು ತ್ರಿ ತಲಾಕ ರದ್ದತಿ, ಮಹಿಳಾ ಉದ್ಯಮ ಸೃಷ್ಟಿಸಲು ಸಾಲವಿತರಣೆಯ ಕ್ರಮಗಳು ಹಾಗೂ ಬಡ್ಡಿಯಲ್ಲಿ ರಿಯಾಯತಿ, ಉಜ್ವಲಾ ಯೋಜನೆಯಡಿ ಗ್ಯಾಸ್ ವಿತರಣೆ, ಆಯುಷ್ಮಾನ ಆರೋಗ್ಯ ಕಾರ್ಡದಂತಹ ನೂರರು ಯೋಜನೆಗಳನ್ನ ಮಹಿಳೆಯರ ಪರವಾಗಿ ಜಾರಿತಂದಿರುವ ಫಲದಿಂದ ಇಂದು ಜಾತಿ ಮತ ಪಂತ ಎನ್ನದೆ ಎಲ್ಲ ಮಹಿಳೆಯರು ಬಿಜೆಪಿ ಪರ ನಿಂತಿದ್ದಾರೆ ಎಂದರು.

ರಾಜ್ಯ ಕಾರ್ಯದರ್ಶಿ ಭಾರತಿ ಮಗದುಮ್ಮ ಮಾತನಾಡಿ, ಮಹಿಳೆಯರು ಇಂದು ಸಭಲರಾಗಿದ್ದು ಎಲ್ಲ ಕ್ಷೇತ್ರಗಳಲ್ಲಿ ಇಂದು ಮಹಿಳೆಯರು ಮೇಲುಗೈ ಇದೆ. ಕಿತ್ತೂರು ಚೆನ್ನಮ್ನ ನಾಡಿನಲ್ಲಿ ಮಹಿಳೆ ಒಬ್ಬರು ಚುನಾವಣೆಯಲ್ಲಿ ದಿಗ್ವಿಜಯ ಸಾಧಿಸಿ ಸಂಸತನಲ್ಲಿ ಸ್ಥಾನ ಪಡೆಯುವ ಅವಕಾಶ ಬಂದಿದೆ.

ಅದನ್ನು ಸಮರ್ಥವಾಗಿ ನಿಭಾಯಿಸಿ ಮಂಗಲಾ ಸುರೇಶ ಅಂಗಡಿಯವರ ಜಯಕ್ಕೆ ಪ್ರಾಮಣಿಕ ಪರಿಶ್ರಮವಹಿಸಿ ವಿಜಯದ ಪತಾಕೆ ಹಾರಿಸೊಣ ಎಂದರು. ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ಎ17ರಂದು ನಡೆಯುವ ಚುನಾವಣೆಯಲ್ಲಿ ಮಹಿಳಾ ಪದಾಧಿಕಾರಿಗಳ ಪ್ರಯತ್ನದಿಂದ ನಮ್ಮ ಗೆಲವು ಇನ್ನು ಸುಲಭವಾಗಲಿದೆ. ಆದರೆ ನಮ್ಮ ಪ್ರಯತ್ನ ಸತತವಾಗಿರಲಿ.

ಮನೆ ಹೊರಗೆ ಬರದ ಸಾಕಷ್ಟು ಹೆಣ್ಣುಮಕ್ಕಳು ಇಂದು ಬಿಜೆಪಿಯ ತತ್ವ ಸಿದ್ದಾಂತ ಹಾಗೂ ಮಹಿಳಾ ಪರವಾದ ಸರ್ಕಾರದ ಯೋಜನೆಗಳನ್ನು ಅರಿತು ದೇಶ ರಕ್ಷಣೆಯಲ್ಲಿ ರಾಜಿ ಇಲ್ಲದ ಧಿಮಂತ ನಾಯಕ ನರೇಂದ್ರ ಮೋದಿಜಿಯ ಕಾರ್ಯ ಕ್ಷಮತೆ ಇಂದು ಪ್ರತಿ ಮನೆ ಮನೆಗೆ ತಲುಪಿದೆ. ಅದನ್ನು ಮತ್ತೊಮ್ಮೆ ಜನಸಾಮಾನ್ಯರಿಗೆ ತಿಳಿಸಿ ಬಿಜೆಪಿ ಅಭ್ಯರ್ಥಿಯ ಗೆಲುವು ಸಾಧಿಸುವತ್ತ ನಮ್ಮ ಚಿತ್ತವಿರಲಿ ಎಂದರು.

ವಿಭಾಗ ಸಂಘಟನಾ ಸಹ ಕಾರ್ಯದರ್ಶಿ ಬಸವರಾಜ ಯಾಕ್ಕಂಚಿ, ರಾಜ್ಯ ಉಪಾಧ್ಯಕ್ಷ ಪ್ರೇಮಾ ಭಂಡಾರಿ, ಜಿಲ್ಲಾ ಮಹಿಳಾ ಮೊರ್ಚಾ ಅಧ್ಯಕ್ಷರಾದ ರೇಖಾ ಚಿನ್ನಾಕಟ್ಟಿ, ಸುವರ್ಣಾ ಪಾಟೀಲ, ಮಹಿಳಾ ಚುನಾವಣಾ ನಿರ್ವಹಣಾ ಪ್ರಮುಖ ಲೀನಾ ಟೋಪ್ಪನ್ನವರ ವೇದಿಕೆಯ ಮೆಲಿದ್ದರು. ಮಹಾನಗರ ಹಾಗೂ ಗ್ರಾಮಾಂತರ ಜಿಲ್ಲಾ ಮಹಿಳಾ ಪದಾಧಿಕಾರಿಗಳ ಇದ್ದರು.

Read All News