ಜಾರಕಿಹೊಳಿ ಬ್ರದರ್ಸ್ ವಿರುದ್ಧ ನೆರೆ ಸಂತ್ರಸ್ತರಿಂದ ಪ್ರತಿಭಟನೆ..!

  • 15 Jan 2024 , 12:47 AM
  • Belagavi
  • 159
ಗೋಕಾಕ : ಜಾರಕಿಹೊಳಿ ಬ್ರದರ್ಸ್ ವಿರುದ್ಧ ಬಿದಿಗಿಳಿದು ಪ್ರತಿಭಟನೆ ನಡೆಸುತ್ತಿರುವ ನೆರೆ ಸಂತ್ರಸ್ತರು. ಬೆಳಗಾವಿ ಜಿಲ್ಲೆಯ ಗೋಕಾಕ್ ಹಾಗೂ ಮೂಡಲಗಿಯ ನೆರೆ ಸಂತ್ರಸ್ತರಿಂದ ಗೋಕಾಕ ಪಟ್ಟಣದಲ್ಲಿ ಪ್ರತಿಭಟನೆ.
ಕಳೆದ ವರ್ಷ ದೊರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ನೆರೆ ಹಾವಳಿಯಿಂದ ಅತಿವೃಷ್ಟಿಯಾಗಿ ಅಪಾರ ಹಾನಿ ಉಂಟಾಗಿ ಜನರ ಬದುಕು ಹದಗೆಟ್ಟು ಹೋಗಿದೆ ಅವರಿಗೆ ನಿಲ್ಲಲು ಇನ್ನೂ ಸರಿಯಾಗಿ ಸೂರಿಲ್ಲ ಇನ್ನೂ ಸುಮಾರು 9 ಸಾವಿರಕ್ಕಿಂತ ಹೆಚ್ಚಿನ ಸಂತ್ರಸ್ತ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ದೊರೆತಿಲ್ಲ ಆದ ಕಾರಣ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಗೋಕಾಕ್ ಪಟ್ಟಣದ ತಹಶಿಲ್ದಾರ್ ಕಚೇರಿಗೆ ಮುತ್ತಿಗೆ ಹಾಕಿದ ನೆರೆ ಸಂತ್ರಸ್ತರು ಬೊಬ್ಬೆ ಹೊಡೆದು ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿವಿಧ ರೈತ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಜನ ನೆರೆ ಸಂತ್ರಸ್ತರು ಪುಟ್ಟ ಪುಟ್ಟ ಮಕ್ಕಳನ್ನು ಕರೆದುಕೊಂಡು ಬಂದು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ದನ, ಎತ್ತು, ‌ಕರುಗಳೊಂದಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ಆಕ್ರೋಶವನ್ನು ಹೊರಹಾಕಿದ್ದಾರೆ.
ಮೂಡಲಗಿ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ಗೋಕಾಕ್ ಕ್ಷೇತ್ರದ ಶಾಸಕ ರಮೇಶ ಜಾರಕಿಹೊಳಿ ಬ್ರದರ್ಸ ಈ ಎರಡು ಕ್ಷೇತ್ರವು ಬಿಜೆಪಿ ಪಕ್ಷವನ್ನು ಪ್ರತಿನಿಧಿಸುತ್ತಿರುವ ಶಾಸಕರಾಗಿದ್ದಾರೆ.

Read All News