ಬೆಳಗಾವಿ: ಲೋಕಸಭಾ ಉಪ ಚುನಾವಣೆಯ ಪ್ರಚಾರದ ಅಂಗವಾಗಿ, ಗುರುವಾರ ಬೆಕ್ಕಿನಕಿರೆಯಲ್ಲಿ ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಸಚಿವರಾದ ಸೌ. ಶಶಿಕಲಾ ಜೊಲ್ಲೆ ಅವರು ಬಿಜೆಪಿ ಪಕ್ಷದ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಪರ ಮತಯಾಚನೆ ಮಾಡಿದರು.
ಕೇಂದ್ರದ ಮಾಜಿ ಸಚಿವ ದಿವಂಗತ ಸುರೇಶ್ ಅಂಗಡಿ ಅವರ ಅಭಿವೃದ್ಧಿ ಕಾರ್ಯಗಳು ಇಂದಿಗೂ ಜನರ ಮನದಲ್ಲಿದೆ. ಹೀಗಾಗಿ ಅವರ ಜನಸೇವಾ ಕಾರ್ಯಗಳು ಮಂಗಲಾ ಅಂಗಡಿ ಅವರಿಗೆ ಶ್ರೀರಕ್ಷೆಯಾಗಲಿದೆ. ಜನಪರ ಪಕ್ಷವಾಗಿರುವ ನಮ್ಮ ಬಿಜೆಪಿಗೆ ಮಗದೊಮ್ಮೆ ಮತದಾರ ಬಾಂಧವರು ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಬೆಳಗಾವಿ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಬಿಜೆಪಿ ಮಂಡಲ ಅಧ್ಯಕ್ಷ ಧನಂಜಯ್ ಜಾಧವ, ಮಾಜಿ ಅಧ್ಯಕ್ಷ ವಿನಯ್ ಕದಮ, ಶಿವಾಜಿ ಸುಣಕರ್, ಮಹಿಳಾ ಮೋರ್ಚಾ ಸದಸ್ಯರಾದ ಭಾಗ್ಯಶ್ರೀ ಕೋಕೆಟಕರ ಹಾಗೂ ಚೇತನ್ ಅಂಗಡಿ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.