ಸಚಿವ ಈಶ್ವರಪ್ಪ ಬಹಿರಂಗ ಪತ್ರ ಬರೆಯಬಾರದಿತ್ತು: ಶೆಟ್ಟರ

  • 12 Dec 2023 , 10:10 AM
  • Belagavi
  • 101

ಬೆಳಗಾವಿ: ಕೆ.ಎಸ್.ಈಶ್ವರಪ್ಪ ಹಿರಿಯ ಸಚಿವರಿದ್ದಾರೆ. ಅವರು ಸಿಎಂ ವಿರುದ್ದ ಬಹಿರಂಗ ಪತ್ರ ಬರೆಯುವುದು ಅದನ್ನು ರಾಜಪಾಲರಿಗೆ ಕಳುಹಿಸುವುದು ಆಗಬಾರದಿತ್ತು ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.

ಶುಕ್ರವಾರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಸಚಿವ ಯಡಿಯೂರಪ್ಪನವರ ವಿರದ್ದ ಮಾತನಾಡಬಾರದಿತ್ತು.

ಸಿಎಂ ಅವರ ಮಾರ್ಗದರ್ಶನದಲ್ಲಿ ನಾವು ಎಲ್ಲ ಸಚಿವರು ಹೊರಟ್ಟಿದ್ದೇವೆ. ಅವರ ಸಮಸ್ಯೆ ಏನಿದ್ದರೂ ಅವರ ಜತೆಗೆ ಮಾತನಾಡಬೇಕಿತ್ತು. ಅಲ್ಲದೆ, ಸಚಿವ ಸಂಪುಟ ಸಭೆ, ಶಾಸಕರ ಸಭೆಯಲ್ಲಿ ಅವರು ಮಾತನಾಡಬೇಕಿತ್ತು. ಆದರೆ ಪತ್ರ ಬರೆದಿದ್ದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

Read All News