ಬಿಜೆಪಿ ಅಭ್ಯರ್ಥಿ ಮಂಗಲಾ ಗೆಲುವಿಗೆ ಪಣ ತೊಟ್ಟ ಕಮಲ ಪಡೆ

  • 2 Jan 2024 , 6:22 AM
  • Belagavi
  • 95

ಬೆಳಗಾವಿ: ಕೇಂದ್ರ ಸಚಿವರಾಗಿದ್ದ ದಿ.ಸುರೇಶ ಅಂಗಡಿ ಅವರ ಅಭಿವೃದ್ದಿ ಕಾರ್ಯವನ್ನು ಮುಂದುವರೆಸಿಕೊಂಡು ಹೋಗಲು ನನಗೆ ಮತ ನೀಡಿ ಆಶೀರ್ವದಿಸಬೇಕೆಂದು ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಹೇಳಿದರು.

ಶುಕ್ರವಾರ ಬೈಲಹೊಂಗಲ ತಾಲೂಕಿನಲ್ಲಿ ಚನ್ನಮ್ಮಜೀ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮತಪ್ರಚಾರದ ವೇಳೆ ಮಾತನಾಡಿದರು. ಈ ಚುನಾವಣೆ ಅನಿರೀಕ್ಷಿತವಾಗಿ ಬಂದಿದೆ. ಯಾರೂ ಇದನ್ನು ಊಹಿಸಿರಲಿಲ್ಲ.

ದಿ. ಸುರೇಶ ಅಂಗಡಿ ಅವರ ಅಭಿವೃದ್ದಿ ಕಾರ್ಯಗಳು ನನಗೆ ಕೈ ಹಿಡಿಯುತ್ತದೆ ಎನ್ನುವ ವಿಶ್ವಾಸ ನನಗೆ ಇದೆ. ಅಲ್ಲದೆ ಕಳೆದ ೧೭ ವರ್ಷಗಳಿಂದ ಸುರೇಶ ಅಂಗಡಿ ಅವರಿಗೆ ನೀಡಿದ ಬೆಂಬಲವನ್ನು ನನಗೂ ನೀಡುವಂತೆ ಮತದಾರರಲ್ಲಿ ವಿನಂತಿಸಿಕೊಂಡರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಸುಭದ್ರ ಆಡಳಿತ ನೀಡುತ್ತಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿನ ಬಡವರಿಗೆ. ಮಹಿಳೆಯರಿಗೆ, ರೈತರಿಗೆ ಸಾಕಷ್ಟು ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಅಲ್ಲದೆ ಸಾವಿರಾರ ಮಹಿಳೆಯರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸುರೇಶ ಅಂಗಡಿ ಅವರು ಹೇಗೆ ಇರಬೇಕು ಎಂದು ದೂರ ದೃಷ್ಠಿಯಿಟ್ಟುಕೊಂಡು ಅಭಿವೃದ್ದಿ ಪಥದಲ್ಲಿ ಕೊಂಡೊಯುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.

ಸುಭದ್ರ ಆಡಳಿತ ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಕೈ ಬಲ ಪಡಿಸಲು ಬಿಜೆಪಿಗೆ ಮತ ನೀಡಬೇಕೆಂದರು. ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಮಾಜಿ ಶಾಸಕ, ಕಾಡಾ ಅಧ್ಯಕ್ಷ ಡಾ. ವಿ.ಐ.ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Read All News