ಚೀನಾ ಗುಂಡಿನ‌ ದಾಳಿಗೆ ಮೂವರು ಯೋದರು ಹುತಾತ್ಮ

  • 30 Dec 2023 , 12:01 PM
  • Jammu&Kashmir
  • 123
ಭಾರತ ಚೀನಾ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದೇ ರಾತ್ರೋ ರಾತ್ರಿ ಸೈನಿಕರನ್ನು ಜಮಾವಣೆ ಮಾಡಿ ಅವರು ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಲಡಾಕ್
ಗಾಲ್ವನ್ ಕಣಿವೆ ಭಾಗದಲ್ಲಿ ನಿನ್ನೆ ರಾತ್ರಿ ಅಪ್ರಚೋದಿತ ಗುಂಡಿನ ದಾಳಿ ಮೂವರು ಯೋಧರು ಹುತಾತ್ಮರಾಗಿದ್ದಾರೆ . ಚೀನಾ ಗುಂಡಿನ ದಾಳಿಗೆ ಸೇನೆಯ ಹಿರಿಯ ಅಧಿಕಾರಿ ಹಾಗೂ ಇಬ್ಬರು ಸೈನಿಕರು ಮೃತಪಟ್ಟಿದ್ದು ಎಂದು ತಿಳಿದು ಬಂದಿದೆ . ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಚೀನಾ ಹಾಗೂ ಭಾರತದ ಹಿರಿಯ ಸೇನಾ ಅಧಿಕಾರಿಗಳು ಮಾತುಕತೆ ನಡೆಸುತ್ತಿದ್ದಾರೆ . ಒಂದು ತಿಂಗಳಿನಿಂದ ಚೀನಾ ಸೈನಿಕರು ಬೀಡು ಬಿಟ್ಟಿದ್ದು ಅಪ್ರಚೋದಿತ ಗುಂಡಿನ ದಾಳಿ ಮಾಡಿದ್ದಾರೆ . ಅದಕ್ಕೆ ಪ್ರತಿಯಾಗಿ ಭಾರತೀಯ ಸೈನಿಕರೂ ಕೂಡ ಪ್ರತಿರೋಧ ತೋರುತ್ತಿದ್ದಾರೆ . ಇದರಿಂದ ಭಾರತೀಯ ಮೂರು ಯೋಧರು ಹುತಾತ್ಮರಾಗಿದ್ದಾರೆ. ಗಡಿಯಲ್ಲಿ ಚೀನಾ ಸೈನಿಕರ ಉಪಟಳ ಹೆಚ್ಚಾಗಿದೆ. ಭಾರತ ಚೀನಾ ಉಭಯ ದೇಶಗಳ ನಡುವೆ ಬಿಕ್ಕಟ್ಟು ಹೆಚ್ಚಾಗಿದೆ ಇನ್ನು ಭಾರತ ಚೀನಾ ಯುದ್ಧಕ್ಕೆ ಮುನ್ಸೂಚನೆ ನೀಡುವಂತಾಗಿದೆ.

Read All News