ಛೋರ್ಲಾ ಬಳಿ ಗುಡ್ಡ ಕುಸಿತ ಬೆಳಗಾವಿ - ಗೋವಾ ಸಂಪರ್ಕ ತಾತ್ಕಾಲಿಕ ಸ್ಥಗಿತ
- 16 Jun 2020 , 8:26 PM
- Belagavi
- 90
ಬೆಳಗಾವಿ: ವರುಣ ಆರ್ಭಟ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೋರಾಗಿಯೇ ಸದ್ದು ಮಾಡುತ್ತಿದ್ದಾನೆ. ಇಂದು ಧಾರಾಕಾರ ಮಳೆಗೆ ಛೋರ್ಲಾ ಘಾಟ್ ಬಳಿ ಗುಡ್ಡ ಕುಸಿದಿದೆ ಅರಣ್ಯದಲ್ಲಿ ದಿನನಿತ್ಯ ಧಾರಾಕಾರ ಮಳೆಯಾಗುತ್ತಿದ್ದು , ಛೋರ್ಲಾ ಬಳಿ ಗುಡ್ಡ ಕುಸಿದಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆ ಯಾಗಿದೆ. ಇದರಿಂದ ಬೆಳಗಾವಿ ಹಾಗೂ ಗೋವಾ ನಡುವಿನ ಸಾರಿಗೆ ಸಂಪರ್ಕವನ್ನು ತಾತ್ಕಾಲಿಕ ಸ್ಥಗಿತಮಾಡಲಾಗಿದೆ. ಗುಡ್ಡ ಕುಸಿದ ಪರಿಣಾಮ ರಸ್ತೆ ಸಂಪೂರ್ಣ ಹಾಳಗಿದ್ದು ಕರ್ನಾಟಕ ಹಾಗೂ ಗೋವಾ ನಡುವಿನ ಸಂಪರ್ಕ ಕಡಿತ ಗೊಂಡಿದೆ. ಅಧಿಕಾರಿಗಳು ದುರಸ್ತಿಗೆ ಮುಂದಾಗಿದ್ದು ತ್ವರಿತಗತಿಯಲ್ಲಿ ಕೆಲಸ ಸಾಗುತ್ತಿದೆ. ಭೂ ಕುಸಿತದಿಂದಾಗಿ ಹಾಗೂ ಗೋವಾದ ಛೋರ್ಲಾ ಬಳಿ ಭಾರೀ ಪ್ರಮಾಣದ ಮಣ್ಣು ಹಾಗೂ ಮರಗಳು ಉರುಳಿವೆ. ಅಧಿಕಾರಿಗಳು ಸಂಚಾರಕ್ಕೆ ಶೀಘ್ರವೇ ವ್ಯವಸ್ಥೆ ಮಾಡಲಾಗುವದು ಎಂದು ಹೇಳುದ್ದಾರೆ. ಕುಸಿತ ಘಟನೆ ಸಂಬಂಧ ಗೋವಾ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ ರಸ್ತೆ ತೆರವು ಕಾರ್ಯ ಶುರುವಾಗಿದೆ.