ಉಗ್ರರ ಅಟ್ಟಹಾಸ, 22 ಯೋಧರು ಹುತಾತ್ಮ

  • 15 Jan 2024 , 5:01 AM
  • Chhattisgarh
  • 96

ಛತ್ತೀಸ್‌ಗಡ: ಕೆಂಪು ಉಗ್ರರು ಮತ್ತೆ ಆರ್ಭಟಿಸಿದ್ಧಾರೆ. ಉಗ್ರರು ಪೈಶಾಶಿಕ ಕೃತ್ಯ ಎಸಗಿದ್ದು, ಕೆಂಪು ಉಗ್ರರ ದಾಳಿಗೆ 22 ಭದ್ರತಾ ಸಿಬ್ಬಂದಿ ವೀರ ಮರಣವನ್ನಪ್ಪಿದ್ದಾರೆ. ಇಲ್ಲಿನ ಸುಕ್ಮಾ-ಬಿಜಾಪುರ ಗಡಿ ಬಳಿ ನಕ್ಸಲೀಯರೊಂದಿಗಿನ ಎನ್‌ಕೌಂಟರ್‌ನಲ್ಲಿ 22 ಯೋಧರು ಹುತಾತ್ಮರಾಗಿದ್ದಾರೆ. ಏಕಾಏಕಿ ನಡೆದ ಈ ದಾಳಿಯಲ್ಲಿ ಎರಡೂ ಕಡೆಯವರು ತಮ್ಮ ಪ್ರಾಣ ಕಳೆದುಕೊಂಡಿದ್ದು, ನಕ್ಸಲೀಯರ ಈ ಪೈಶಾಚಿಕ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗಿದೆ. ದಾಳಿ ಬಳಿಕ ಹಲವು ನಕ್ಸಲೀಯರು ಸ್ಥಳದಿಂದ ಪರಾರಿಯಾಗಿದ್ದಾರೆ.

Read All News