ಮೋದಿ ಕೈ ಬಲ ಪಡಿಸಲು ಮಂಗಲಾ ಅಂಗಡಿ ಅವರನ್ನು ಆಯ್ಕೆ ಮಾಡಿ; ರಮೇಶ ಕತ್ತಿ

  • 9 Jan 2024 , 9:28 AM
  • Belagavi
  • 93

ಬೆಳಗಾವಿ: ಪ್ರಧಾನಮಂತ್ರಿಗಳ ಪರಿಹಾರ ನಿಧಿಯಿಂದ ಬಡ ರೋಗಿಗಳಿಗೆ ರಾಜ್ಯದಲ್ಲಿಯೆ ಅತ್ಯಧಿಕ ಆರ್ಥಿಕ ಸಹಾಯ ಕೊಡಿಸಿದ ಸುರೇಶ ಅಂಗಡಿಯವರ ಪತ್ನಿ ಮಂಗಲಾ ಅಂಗಡಿಯವರನ್ನು ಕ್ಷೇತ್ರದ ಜನತೆ ಹೆಚ್ಚಿನ ಮತಗಳ ಅಂತರದಿಂದ ಸಂಸದರನ್ನಾಗಿ ಆಯ್ಕೆ ಮಾಡಬೇಕೆಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮಾಜಿ ಸಂಸದ ರಮೇಶ್ ಕತ್ತಿ ಹೇಳಿದರು.

ಸವದತ್ತಿ ತಾಲೂಕಿನ ಹೊಸೂರು ಗ್ರಾಮದ ಸಿದ್ದನಗೌಡರ ಮನೆಯಂಗಳಲದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಕ್ಯಾನ್ಸರ್, ಹೃದಯ ಸಂಬಂಧಿತ ಹಾಗೂ ಇನ್ನಿತರ ಬಡರೋಗಿಗಳ ಕ್ಷೇಮಾಭಿವೃದ್ಧಿಗಾಗಿ ಇರುವ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ರೋಗಿಗಳಿಗೆ ಹಣವನ್ನು ಬಿಡುಗಡೆಗೊಳಿಸಲು ಸುರೇಶ್ ಅಂಗಡಿ ಅವರ ಕಾರ್ಯಕ್ಕೆ ಬೆನ್ನೆಲುಬಾಗಿ ಎಲೆಮರೆಯ ಕಾಯಿಯಂತೆ ಕಾರ್ಯ ನಿರ್ವಹಿಸುತ್ತಿದ್ದವರು

ಅವರ ಪತ್ನಿ ಮಂಗಲಾ ಅಂಗಡಿ, ಇವರೊಬ್ಬರು ವಿಜ್ಞಾನ ಪದವಿದರರಾಗಿ, ಸುರೇಶ ಅಂಗಡಿಯವರ ಜೋತೆಯಲ್ಲಿ ಸಂಸತ್ ಅಧಿವೇಶನ ನಡೆದಾಗ ದಿಲ್ಲಿಗೆ ತೆರಳುತ್ತಿದ್ದರು. ಸುರೇಶ ಅಂಗಡಿಯವರಿಗೆ ಬೆನ್ನೆಲುಬಾಗಿ ಅವರ ಜೊತೆಯಾಗಿ ಇರುತ್ತಿದ್ದರು. ದಿಲ್ಲಿಯ ಮನೆಯಲ್ಲಿ ಇರಲಾರದೆ ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ದಾಖಲೆಗಳನ್ನು ತೆಗೆದುಕೊಂಡು ದಿಲ್ಲಿಯಲ್ಲಿರುವ ಪ್ರತಿಯೊಂದು ಕಚೇರಿಗೆ ನೇರವಾಗಿ ಹೋಗಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಕೆಲಸಕಾರ್ಯಗಳ ಕಾಮಗಾರಿಗಳಿಗೆ ಅನಮೊದನೆ ತಗೆದುಕೊಳ್ಳುವ ಅನುಭವ ಅವರಿಗಿದೆ ಎಂದರು.

ಆದರೆ ನಮ್ಮೆಲ್ಲರ ನಾಯಕರಾಗಿದ್ದ ಸುರೇಶ್ ಅಂಗಡಿ ಅವರ ನಿಧನದಿಂದ ಅನಿವಾರ್ಯವಾಗಿ ಬಂದಿರುವ ಚುನಾವಣೆಯಲ್ಲಿ ಮಂಗಲಾ ಅಂಗಡಿಯವರನ್ನು ಆಯ್ಕೆ ಮಾಡುವುದು ನಮ್ಮ ಕರ್ತವ್ಯ ಎಂದರು. 40 ವರ್ಷದ ಬಿಡಿಸಿಸಿ ಬ್ಯಾಂಕ್ ನಲ್ಲಿ ನಿರ್ದೇಶಕನಾಗಿ ಅಧ್ಯಕ್ಷರಾಗಿ ಅನೇಕ ಕಾರ್ಯಗಳ ಏಳುಬೀಳುಗಳ ಬ್ಯಾಂಕ್ ಪರಿಸ್ಥಿತಿಯನ್ನು ಅರಿತು ನಾನು ಕಾರ್ಯನಿರ್ವಹಿಸಿದ್ದೇನೆ.

ಪ್ರತಿಯೊಂದು ಹಳ್ಳಿಯಲ್ಲಿ ರೈತರಿಗೆ ಆರ್ಥಿಕ ಸಹಕಾರ ನೀಡುವುದರೊಂದಿಗೆ ಕೃಷಿ ಉಪಕರಣಗಳು ಖರೀದಿಗೆ ಜಿಲ್ಲೆಯ ರೈತರಿಗೆ ಆರ್ಥಿಕ ಸಾಹಾಯ ಬಿಡಿಸಿಸಿ ಬ್ಯಾಂಕ್ ನಿಂದ ಆಗುತ್ತಿದೆ ಒಂದು ಕಾಲದಲ್ಲಿ ಮುಚ್ಚಿ ಹೋಗುತ್ತಿದ್ದ ಡಿಸಿಸಿ ಬ್ಯಾಂಕ್ ಇಂದು ರಾಜ್ಯದಲ್ಲಿಯೇ ಎರಡನೆಯ ಸ್ಥಾನ ಪಡೆದಿದೆ ಇದಕ್ಕೆಲ್ಲ ನಿಮ್ಮ ಸಹಕಾರವೇ ಕಾರಣ ನಿಮ್ಮೆಲ್ಲರ ಸಹಕಾರ ನನ್ನ ಹಾಗೂ ಸುರೇಶ್ ಅಂಗಡಿ ಅವರ ಮೇಲೆ ಇರುವಂತೆ ಈ ಬಾರಿ ಮಂಗಳ ಸುರೇಶ್ ಅಂಗಡಿ ಅವರನ್ನು ಆಶೀರ್ವದಿಸಿ ಅತಿ ಹೆಚ್ಚಿನ ಮತಗಳ ಅಂತರದಿಂದ ಆಯ್ಕೆ ಮಾಡಬೇಕೆಂದು ವಿನಂತಿಸಿದರು.

ಕಿತ್ತೂರು ಶಾಸಕ ಮಹಂತೇಶ್ ದೊಡ್ಡಗೌಡರ್ ಮಾತನಾಡಿ, ಬೆಳಗಾವಿ ಲೋಕಸಭೆಯ ಮತದಾರ ಬಂಧುಗಳು ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ ದೇಶದ ಅಭಿವೃದ್ಧಿಪರ ಕಾರ್ಯಮಾಡುತ್ತಿರುವ ನರೇಂದ್ರ ಮೋದಿ ಅವರ ಕೈ ಬಲಪಡಿಸಲು ಮಂಗಲ ಅಂಗಡಿಯವರನ್ನು ಆಯ್ಕೆ ಮಾಡಲಿದ್ದಾರೆ ಎಂದರು.

ಕಾಡಾ ಅಧ್ಯಕ್ಷ ಡಾ.ವಿ.ಆಯ್. ಪಾಟೀಲ್ ಮಾತನಾಡಿ, ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ರೈತರ ಹೊಲಗಳಿಗೆ ರಸ್ತೆಗಳು ಬೆಳಗಾವಿ ಧಾರವಾಡ ನೇರ ರೈಲು ರೈಲು ಮಾರ್ಗ ಬೆಳಗಾವಿಗೆ ಸುವರ್ಣಸೌಧ ರಾಣಿ ಚೆನ್ನಮ್ಮ ವಿಶ್ವವಿದ್ಯಾನಿಲಯ ರಫ್ತು ಕೇಂದ್ರ ಉಡಾನ್ ಯೋಜನೆ ಸಾಂಬ್ರಾ ವಿಮಾನ ನಿಲ್ದಾಣದ ಅಭಿವೃದ್ಧಿಯಂತಹ ಸಾವಿರಾರು ಕಾರ್ಯಗಳನ್ನು ಕೈಗೊಂಡಿದ್ದ ಸುರೇಶ್ ಅಂಗಡಿ ಅವರ ಕಾರ್ಯವನ್ನು ಮನಗಂಡು ಪ್ರತಿಯೊಬ್ಬರು ಬಿಜೆಪಿ ಪರ ಪರವಾಗಿದ್ದು ಅತ್ಯಧಿಕ ಅಂತರದಿಂದ ಮಂಗಲ ಅಂಗಡಿ ಆಯ್ಕೆಯಾಗಲಿದ್ದಾರೆ ಎಂದರು.

ಹತ್ತಿ ಉದ್ಯಮಿ ವಿಜಯ್ ಮೆಟಗುಡ್ಡ ಹಾಗೂ ಮಾಜಿ ಶಾಸಕಿ ಸೀಮಾ ಮಸೂತಿ ಮಾತನಾಡಿ ಸರಳ ಸಜ್ಜನಿಕೆಯ ಅಭಿವೃದ್ಧಿಪರ ಕಾರ್ಯವನ್ನು ಮಾಡುತ್ತಿದ್ದ ಸುರೇಶ್ ಅಂಗಡಿ ಅವರ ನಿಧನ ನಮ್ಮೆಲ್ಲರಿಗೂ ದುಃಖ ತಂದಿದೆ ಆದರೆ ಆಸ್ಥಾನವನ್ನು ತುಂಬಲು ಮಂಗಲ ಅಂಗಡಿಯವರನ್ನು ಬಿಜೆಪಿ ಪರ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದ್ದು ಅವರ ಆಯ್ಕೆಗಾಗಿ ಕಾರ್ಯಕರ್ತರು ಪರಿಶ್ರಮಿಸಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿ ಮಾಧ್ಯಮ ಸಂಚಾಲಕ ಎಫ್.ಎಸ್.ಸಿದ್ದನಗೌಡರ, ಮಂಡಲ ಅಧ್ಯಕ್ಷ ಮಡಿವಾಳಪ್ಪ ಚಳಕೊಪ್ಪ, ಜಿಲ್ಲಾ ಸಹಕಾರಿ ಪ್ರಕೊಷ್ಟಾದ ಸಂಚಾಲಕ ಸುನಿಲ್ ಮರಕುಂಬಿ, ನಿಂಗಪ್ಪ ಚೌಡನ್ನವರ ಮಡಿವಾಳಪ್ಪ ಹೋಟಿ, ನಾಗು ಮರಕುಂಬಿ, ಮಲ್ಲಿಕಾರ್ಜುನ್ ಬೋಳೆತ್ತಿನ, ಈರಣ್ಣಾ ಬೇಂಡಿಗೆರಿ, ಕುಮಾರ ಸೋಗಲ, ಈರಣ್ಣ ಹುರಳಿ, ಮಹಾಂತೇಶ್ ಚಿಕ್ಕೊಪ್ಪ ಉಳವಪ್ಪ ಸಂಗೊಳ್ಳಿ, ಬಸವರಾಜ್ ಮುಗಬಸವ, ಗೌಡಪ್ಪ ಹೊಸಮನಿ ವಿನೋದ್ ಭಾಂವಿಹಾಳ, ಬೈಲಪ್ಪ ಹುಂಬಿ, ರಾಮಣ್ಣ ಬಾಳೆಕುಂದ್ರಗಿ, ನಾಗರಾಜ್ ಬುಡಶಟ್ಟಿ, ಸಿದ್ದಪ್ಪ ನಾಗನೂರು, ಸಂಜು ಪಾಟೀಲ್ ಮಲ್ಲಿಕಾರ್ಜುನ ಹುರಕಡ್ಲಿ, ಮಲ್ಲಪ್ಪ ಮದಲಭಾಂವಿ, ಸಿದ್ದಪ್ಪ ಗುಮ್ಮಗೋಳ, ಬಸಪ್ಪ ಸಿದ್ನಾಳ, ಮಲ್ಲಯ್ಯ ಪೂಜೇರ, ಗೂಳಪ್ಪ ಹೊಳಿ, ಮಹಾಂತೇಶ ಕಲಭಾಂವಿ, ಸೋಮು ವೀವೆಕಿ, ಮಡಿವಾಳಪ್ಪ ದುಗ್ಗಾಣಿ ಈರಣ್ಣಾ ಪಾಟೀಲ ಹುಸೇನ ಮುಲ್ಲಾ ಬಸಪ್ಪ ಬೋಳೆತ್ತಿನ ಮುಂತಾದವರು ಇದ್ದರು.

Read All News