ಇಂದಿರಾ ಗಾಂಧಿಗೆ ಅನುಭವ ಇತ್ತಾ ? ಕಟೀಲ್

  • 30 Dec 2023 , 9:35 AM
  • Belagavi
  • 92

ಬೆಳಗಾವಿ :ನೆಹರೂ ನಿಧನರಾದಾಗ ಇಂದಿರಾ ಗಾಂಧಿ ಪ್ರಧಾನಿ ಅಭ್ಯರ್ಥಿ ಘೋಷಣೆ ಮಾಡಿದಾಗ ಅವರಿಗೆ ಅನುಭವ ಇತ್ತೆ. ಈಗ ಅವರು ಬೆಳಗಾವಿ ಲೋಕಸಭಾ ಬಿಜೆಪಿ ಅಭ್ಯರ್ಥಿಯ ಬಗ್ಗೆ ಮಾತನಾಡುವುದು ಎಷ್ಟು ಸರಿ ಎಂದು ನಳೀನ ಕುಮಾರ ಕಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ನಲ್ಲಿನ ಒಳ ಜಗಳ ಬೀದಿಗೆ ಬಿದ್ದಿವೆ. ಮುಂದಿನ ಬಾರಿ ಸಿಎಂ ನಾನೆ ಎಂದು ಹೇಳಿಕೊಂಡು ‌ಓಡಾಡುತ್ತಿದ್ದಾರೆ. ಒಂದು ಬಣ ಸಿದ್ದರಾಮಯ್ಯನ‌ ವಿರುದ್ದ ಕೆಲಸ‌ ಮಾಡುತ್ತಿದೆ. 2023ರ‌ ಚುನಾವಣೆ ಮುಗಿದ ಬಳಿಕ ಸಿದ್ದರಾಮಯ್ಯ ಒಂದೂವರೆ‌ ವರ್ಷದಲ್ಲಿ ರಾಜಕೀಯದಿಂದ ಹೊರ ಹೊಗುತ್ತಾರೆ ಎಂದು ಭವಿಷ್ಯ ನುಡಿದರು.

ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿ ಪ್ರಬಲವಾಗಿದ್ದಾರೆ ಎಂದು ಅವರನ್ನು ‌ಮುಗಿಸಲು ಸಿದ್ದರಾಮಯ್ಯ ‌ಹಾಗೂ ಡಿ.ಕೆ.ಶಿವಕುಮಾರ ಸೇರಿಕೊಂಡು ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಒತ್ತಾಯ ಪೂರ್ವಕವಾಗಿ ನಿಲ್ಲಿಸಿ ಸತೀಶ ಅವರನ್ನು ಈ ಇಬ್ಬರು ಘಟಾನುಘಟಿ ನಾಯಕರು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆಸಿದ್ದಾರೆ ಎಂದು ಆರೋಪಿಸಿದರು.

Read All News