ಮಂಗಲ ಅಂಗಡಿ ನಾಲ್ಕು ಲಕ್ಷ ಮತಗಳ ಅಂತರದಲ್ಲಿ ಗೆಲವು ಸಾಧಿಸುತ್ತಾರೆ: ಸಿಎಂ ವಿಶ್ವಾಸ

  • 15 Jan 2024 , 2:09 AM
  • Belagavi
  • 102

ಬೆಳಗಾವಿ: ಈಗಾಗಲೇ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪರ ಉತ್ತಮವಾದ ವಾತಾವರಣ ಇದೆ. ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಅವರು ಸುಮಾರು ನಾಲ್ಕು ಲಕ್ಷಗಳ ಮತಗಳ ಅಂತರದಿಂದ ಗೆಲವು ಸಾಧಿಸುತ್ತಾರೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ದಿನೇ ದಿನೇ ಬಿಜೆಪಿ‌ ಅಭ್ಯರ್ಥಿ ಪರ ವಾತಾವರಣ ವಾಗುತ್ತಿದೆ. ಹಗಲು ರಾತ್ರಿ ಬಿಜೆಪಿ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ನಾಳೆ ಸಂಜೆಯವರೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬಿಳಲಿದೆ. ಮತದಾರರಲ್ಲಿ ವಿನಂತಿ ಮಾಡುತ್ತೇನೆ.

ಸುರೇಶ ಅಂಗಡಿ ಅವರ ತ್ಯಾಗವನ್ನು ಪರಿಗಣಿಸಿ ಅವರ ಧರ್ಮ ಪತ್ನಿ ಮಂಗಲ ಅಂಗಡಿ‌ ಅವರಿಗೆ ಮತ ನೀಡಬೇಕು. ಬೆಳಗಾವಿ ಲೋಕಸಭೆಗೆ ಮೊದಲ‌ ಬಾರಿ ಮಹಿಳೆಗೆ ಬಿಜೆಪಿ ಟಿಕೆಟ್ ನೀಡಿದ್ದೇವೆ. ವಿಶೇಷವಾಗಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಬಂದು ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕೆಂದು ವಿನಂತಿಸಿಕೊಂಡರು.

Read All News