ಗೋಕಾಕ ಮತಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಪ್ರಿಯಾಂಕಾ ಜಾರಕಿಹೊಳಿ ಬಿರುಸಿನ ಪ್ರಚಾರ

  • 23 Dec 2023 , 8:46 AM
  • Belagavi
  • 103

ಗೋಕಾಕ:  ಮತಕ್ಷೇತ್ರದ ಗೊಡಚಿನಮಲ್ಕಿ, ಮೇಲ್ಮನಹಟ್ಟಿ, ಯದ್ದಲಗುಡ್ಡ, ನೇಲಗಂಟಿ, ಬೂದಿಹಾಳ, ಸುಲದಾಳ ಗ್ರಾಮಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಪರ ಯುವ ಮುಖಂಡರಾದ ಪ್ರಿಯಾಂಕಾ ಜಾರಕಿಹೊಳಿ ಅವರು ಇಂದು ಬಿರುಸಿನ ಪ್ರಚಾರ ನಡೆಸಿ, ಮತಯಾಚನೆ ಮಾಡಿದರು. ಪ್ರಚಾರದ ಸಂದರ್ಭದಲ್ಲಿ ಮೇಲ್ಮನಹಟ್ಟಿ ಗ್ರಾಮದಲ್ಲಿ ಪ್ರಿಯಾಂಕಾ ಅವರನ್ನು ಗ್ರಾಮಸ್ಥರು ವಾಧ್ಯಮೇಳಗಳ ಮೂಲಕ ಅದ್ಧೂರಿಯಾಗಿ ಸ್ವಾಗತಿಸಿದರು.

ಗ್ರಾಮದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಏರ್ಪಡಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ಅವರು ಭಾಗವಹಿಸಿ, ಪೂಜೆ ಸಲ್ಲಿಸಿದರು. "ಎ.೧೭ ರಂದು ನಡೆಯುವ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರ ಕ್ರಮ ಸಂಖ್ಯೆ ೨ನೇ ಬಟನ್ ಒತ್ತುವ ಮೂಲಕ ಮತ ನೀಡಿ. ಬೆಳಗಾವಿಯ ಸಮಗ್ರ ಅಭಿವೃದ್ಧಿಗಾಗಿ ಸತೀಶ ಅವರನ್ನು ಬೆಂಬಲಿಸಿ" ಎಂದು ಪ್ರಿಯಾಂಕಾ ಅವರು ಮನವಿ ಮಾಡಿದರು.

ಎಲ್ಲ ಗ್ರಾಮಗಳಲ್ಲಿ ಮನೆಮನೆಗೂ ತೆರಳಿ ಮತಯಾಚಿಸಿದರು. ನೂರಾರು ಕಾರ್ಯಕರ್ತರು ಪ್ರಚಾರದಲ್ಲಿ ಪಾಲ್ಗೊಂಡಿದ್ದರು.

Read All News