ಏ.19ರಿಂದಲೇ ಪರೀಕ್ಷೆ ಆರಂಭ: ವಿ.ಟಿ.ಯು ಸ್ಪಷ್ಟನೆ

  • 30 Dec 2023 , 3:58 AM
  • Belagavi
  • 105

ಬೆಳಗಾವಿ:  ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಬಿ.ಇ./ಬಿ.ಟೆಕ್./ಬಿ.ಆರ್ಕ./ ಬಿ.ಪ್ಲಾನ್. ಕೋರ್ಸಗಳ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಿಲ್ಲ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮಾಹಿತಿ ನೀಡಿದೆ.

“ವಿ.ಟಿ.ಯು ಪರೀಕ್ಷೆ ಮುಂದೂಡಿಕೆ” ಎಂಬ ಸುಳ್ಳು ಸುದ್ದಿಯು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದ ಕಾರಣ ಪರೀಕ್ಷೆ ಮುಂದೂಡಿಕೆ ಇಲ್ಲ ಎಂದು ವಿ.ಟಿ.ಯು ಸ್ಪಷ್ಟನೆ ನೀಡಿದ್ದು, ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಈ ಮೊದಲು ಪ್ರಕಟಿಸಿದಂತೆ ಸೋಮವಾರ ಏ.19ರಿಂದಲೇ ಪ್ರಾರಂಭಗೊಳ್ಳುತ್ತಿವೆ. ಆದ್ದರಿಂದ ವಿದ್ಯಾರ್ಥಿಗಳು ವದಂತಿಗಳಿಗೆ ಕಿವಿಗೊಡದೇ ಪರೀಕ್ಷೆಗೆ ಹಾಜರಾಗಬೇಕೆಂದು ವಿ.ಟಿ.ಯು ಪ್ರಕಟಣೆಯಲ್ಲಿ ತಿಳಿಸಿದೆ.

Read All News