ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿ, ಮತದಾನ ಮಾಡಿದ ಸತೀಶ ಜಾರಕಿಹೊಳಿ

  • 15 Jan 2024 , 2:36 AM
  • Belagavi
  • 107

ಗೋಕಾಕ: ಬೆಳಗಾವಿ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು ನಗರದ ಜಿ.ಆರ್.ಬಿ.ಸಿ. ಕಾಲೊನಿಯ ಸರ್ಕಾರಿ ಕನ್ನಡ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 162 ರಲ್ಲಿ ಮತ ಚಲಾಯಿಸಿದರು.

ಸತೀಶ ಜಾರಕಿಹೊಳಿ ಅವರು ಮತ ಚಲಾಯಿಸಿ, ನಗು ನಗುತ್ತಲೆ ವಿಜಯದ ಸಂಕೇತ ತೋರಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಜಾಪ್ರಭುತ್ವವನ್ನು ಬಲಪಡಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಮತ ಚಲಾಯಿಸಬೇಕು" ಎಂದು ಮನವಿ ಮಾಡಿದರು.

"ಕ್ಷೇತ್ರದಾದ್ಯಂತ ಉತ್ತಮ ಮತದಾನವಾಗುತ್ತಿದೆ. ನಮ್ಮ ಗೆಲುವು ನಿಶ್ಚಿತ" ಎಂದು ಭರವಸೆ ವ್ಯಕ್ತಪಡಿಸಿದರು.

Read All News