ಭಾರತೀಯರು ಬಳಸುತ್ತಿರುವ ಟಾಪ್ ಚೀನಾ ಆಪ್ ಗಳು ಯಾವವು ? ಗುಪ್ತಚರ ಇಲಾಖೆ ಹೇಳಿದ್ದೇನು ಗೊತ್ತಾ ?
- 14 Jan 2024 , 10:53 PM
- Delhi
- 119
ದೇಶದ ಗಡಿಯಲ್ಲಿ ಚೀನಾ ತನ್ನ ನರಿ ಬುದ್ದಿ ತೋರಿಸಿದ ಬೆನ್ನಲ್ಲೇ ಭಾರತದಲ್ಲಿ ಸೈಬರ್ ಸಮರ ಭರ್ಜರಿಯಾಗಿ ಆರಂಭವಾಗಿದೆ ಚೀನಾ ಅಪ್ಲಿಕೇಶನ್ ಗಳನ್ನು ಅನಇನ್ಸ್ಟಾಲ್ ಮಾಡುವ ಮೂಲಕ ಜನರು ಚೀನಾಕೆ ಬಿಸಿ ಮುಟ್ಟಿಸುವ ಕೆಲಸ ಆರಂಭಿಸಿದ್ದಾರೆ. ಸ್ವದೇಶಿ ವಸ್ತುಗಳತ್ತ ಭಾರತೀಯರು ಆಕರ್ಷಣೆ ಆಗುತ್ತಿದದ್ದು ಸಂತಸದ ವಿಷಯ. ಚೀನಾ ಉತ್ಪಾದಿತ ಅಥವಾ ಚೀನಾ ದೇಶದ ವಸ್ತುಗಳ ಬಹಿಷ್ಕಾರದ ಕೂಗು ಸದ್ಯ ದೊಡ್ಡ ಮಟ್ಟದಲ್ಲಿ ರಾಷ್ಟ್ರದುದ್ದಕ್ಕೂ ಕೇಳಿ ಬರುತ್ತಿದೆ. ಟಿಕಟಾಕ್, ಶೇರಇಟ್ ಸೇರಿದಂತೆ ಹಲವು ಚೀನಾ ಆ್ಯಪ್ಗಳನ್ನು ಭಾರತೀಯರು ಬಳಸುತ್ತಿದ್ದು ಅವುಗಳಿಗೆ ಕಡಿವಾಣ ಹಾಕಲೇ ಬೇಕಿದೆ. ಆದರೆ ದೇಶದಲ್ಲಿ ಚೀನಾ ಉತ್ಪಾದಿತ ವಸ್ತುಗಳನ್ನು ಸಂಪೂರ್ಣವಾಗಿ ಬಹಿಷ್ಕಾರ ಮಾಡುವುದು ಸಾಧ್ಯವೇ..? ಎಂಬ ಪ್ರಶ್ನೆ ಅನೇಕರಲ್ಲಿ ಮೂಡುತ್ತಿದೆ. ದೇಶಿಯ ಮಾರುಕಟ್ಟೆಯಲ್ಲಿ ಚೀನಾ ವಸ್ತುಗಳ ಬಳಕೆ ಹೆಚ್ಚಿದೆ. ಅದಷ್ಟೇ ಯಾಕೆ ಸದ್ಯ ನಾವು ನಿತ್ಯ ಉಪಯೋಗಿಸುವ ಬಹುತೇಕ ಅಗತ್ಯ ವಸ್ತುಗಳಲ್ಲಿ ಚೀನಾದ ಸಿಂಹಪಾಲಿದೆ. ಸ್ಮಾರ್ಟ್‌ಫೋನ್ ಸೇರಿದಂತೆ ಮನರಂಜನೆ ನೀಡುವ ಜೂಮ್, ಟಿಕ್ ಟಾಕ್, ಯುಸಿ ಬ್ರೌಸರ್, ಶೇರ್ ಇಟ್ ಹಾಗೂ ಕ್ಲೀನ್ ಮಾಸ್ಟರ್ ಸೇರಿದಂತೆ ಹಲವು ಜನಪ್ರಿಯ ಆಪ್‌ಗಳು ಚೀನಾ ಉತ್ಪಾದಿತವುಗಳೆ ಆಗಿವೆ. ಇನ್ನು ಪಬ್ಜಿಗೂ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಸಂವಹನ ವ್ಯವಸ್ಥೆಯನ್ನು ಕುಸಿಯುವಂತೆ ಚೀನಾ ಮಾಡಲಿದೆ ಎಂಬ ಆತಂಕವೂ ಇದೆ. ಈ ಪೈಕಿ ಕೆಲವು ಸ್ಮಾರ್ಟ್ ಫೋನ್‌ಗಳೊಂದಿಗೆ ಚೀನಾ ನಿರ್ಮಿತ ಇನ್‌ಬಿಲ್ಟ್ ಆಗಿರುವುದರಿಂದ ಅವುಗಳ ಬಳಕೆ ಅನಿವಾರ್ಯವಾಗಬಹುದು. ಆದರೆ ಬೇರೆಡೆಯಿಂದ ಡೌನ್‌ಲೋಡ್ ಮಾಡಿಕೊಂಡು ಬಳಸುವ ಆಪ್‌ಗಳನ್ನು ದೂರವಿಡಬಹುದು. ಕೇಂದ್ರ ಗುಪ್ತಚರ ಇಲಾಖೆಯು ಚೀನಿ ನಿರ್ಮಿತ 52 ಆಪ್‌ಗಳ ಬಳಕೆ ಅಪಾಯಕಾರಿ ಎಂದು ಎಚ್ಚರಿಸಿದೆ. ಇವುಗಳನ್ನು ಬ್ಲಾಕ್ ಮಾಡಬೇಕು ಇಲ್ಲವೇ, ಬಳಸದಂತೆ ಜನರಿಗೆ ಸೂಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಆಪ್‌ಗಳ ಬಳಕೆ ಸುರಕ್ಷಿತವಲ್ಲ. ಹೀಗಾಗಿ ಇವುಗಳಿಂದ ದೂರವಿರುವುದೇ ಒಳ್ಳೆಯದು ಎಂದು ಗುಪ್ತಚರ ಇಲಾಖೆ ತಿಳಿಸಿದೆ. ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿರುವ ಆಪ್‌ಗಳ ಪಟ್ಟಿಯಲ್ಲಿ ವಿಡಿಯೋ ಕಾನ್ಸರೆನ್ಸಿಂಗ್‌ಗೆ ಬಳಸಲಾಗುವ ಜೂಮ್ , ಕಿರು ವಿಡಿಯೋಗಳ ಆಪ್ ಟಿಕ್‌ಟಾಕ್, ಯುಸಿಬ್ರೌಸರ್, ಕೈಂಡರ್, ಶೇರ್ ಇಟ್ ಹಾಗೂ ಕ್ಲೀನ್ ಮಾಸ್ಟರ್ ಆಪ್‌ಗಳು ಪ್ರಮುಖವಾಗಿವೆ. ಭಾರತಿಯರು ರೊಚ್ಚಿಗೆದ್ದು ಚೀನಾ ಅಪ್ಲಿಕೇಶನ್ ಗಳನ್ನು ಬಳಸದಂತೆ ತಾವೇ ಕರೆ ನೀಡುತ್ತಿದ್ದಾರೆ. ಈ ಅಭಿಯಾನ ಜಾಸ್ತಿ ಆಗುತ್ತಿದ್ದಂತೆ ಫೋನಿನಲ್ಲಿರುವ ಚೀನಾ ಅಪ್ಲಿಕೇಶನ್ ಗಳು ಯಾವುದು..? ಚೀನಾ ಆಪ್ ಗಳು ಯಾವವು ಎಂದು ಸುಲಭವಾಗಿ ತಿಳಿಯಲು ರಿಮೂವ್ ಚೀನಾ ಆ್ಯಪ್ ಹೆಸರಿನ ಅಪ್ಲಿಕೇಶನ್ ರೆಡಿ ಮಾಡಿದ್ದು ಸದ್ಯ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಈ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಮಾತ್ರ ಲಭ್ಯ ಇರುವ ಈ ಉಚಿತ ಆ್ಯಪ್ ಅನ್ನು ಜನರು ಬಳಸುತ್ತಿದ್ದು ಈ ಆ್ಯಪ್ ಬಳಕೆ ಮಾಡಿದರೆ ಸಾಕು ಒಂದೇ ಕ್ಲಿಕ್ ನಲ್ಲಿ ಚೀನಾ ಮೂಲದ ಎಲ್ಲ ಆಪ್ ಗಳು ಕಾಣಸಿಗುತಿವೆ. ಕೆಲ ವರ್ಷಗಳಿಂದ ಚೀನಾ ವಿರೋಧಿ ಚಳುವಳಿ ಆರಂಭವಾದರು ಈಗ ಕೋರೊನಾ ವೈರಸ್ ಮೂಲ ಸ್ಥಾನ ಚೀನಾ ಹಾಗೂ ಲಡಾಕ ಭಾಗದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ದೇಶದಲ್ಲಿ ಜೋರಾಗಿ ಚೀನಾ ಬಳಕೆ ನಿಲ್ಲಿಸಿ ಸ್ವದೇಶಿ ವಸ್ತುಗಳನ್ನು ಬಳಸಿ ಎಂಬ ಕೂಗುಗಳು ಕೇಳಿ ಬರುತ್ತಿವೆ.
ಭಾರತೀಯರು ಬಳಸುವ ಟಾಪ್ ಚೀನಾ ಆಪಗಳು ಇವು
Helo, SHAREit, TikTok, Kwai, UCBrowser, UCBrowser Mini, LiveMe, Bigo Live, Vigo Video, BeautyPlus, Xender, CamScanner, PUBG, Clash of Kings, Mobile Legends, ClubFactory, Shein, Romwe AppLock, Club Factory, VMate, Game of Sultans, Mafia City, Battle of Empires.
ಲೋಕಲ್ ವಿವ್ಯೂ ವಿಷೇಶ
ವಿನಯ ಮಠಪತಿ