ಬೆಳಗಾವಿ:ಕೋವಿಡ್-19 ಎರಡನೇ ಅಲೆಯ ಭೀತಿಯ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ವ್ಯಾಪಾರಿಗಳಿಗೆ ಪೊಲೀಸರು ಬಂದ್ ಮಾಡಿಸುವ ಮೂಲಕ ಬಿಸಿ ಮುಟ್ಟಿಸಿದರು.
ನಗರದ ಗಣಪತಿಗಲ್ಲಿ, ಶನಿವಾರಕೂಟ, ಖಡೇಬಜಾರ್, ರವಿವಾರಪೇಟ್ ನಲ್ಲಿ ವ್ಯಾಪಾರ ನಡೆಸುತ್ತಿದ್ದವರಿಗೆ ಪೊಲೀಸರು ಶಾಕ್ ನೀಡಿ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವಂತೆ ಮೈಕ್ ನಲ್ಲಿ ಅನೌನ್ಸ್ ಮಾಡುತ್ತ ಎಲ್ಲರೂ ಮನೆ ಸೇರಿಕೊಳ್ಳುವಂತೆ ಹೇಳಿದರು.