ಕೋವಿಡ್ ಜಾಗೃತಿಗಾಗಿ ಒಂಟೆಗೆ ಮಾಸ್ಕ್ ಹಾಕಿದ ಪಾಲಿಕೆ ಅಧಿಕಾರಿಗಳು

  • 15 Jan 2024 , 12:22 AM
  • Belagavi
  • 164

ಬೆಳಗಾವಿ: ಮಹಾಮಾರಿ ಕೊರೋನಾ 2.0 ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆ ಬೆಳಗಾವಿಯಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು ಒಂಟೆಗೆ ಮಾಸ್ಕ ಹಾಕಿ ಕೊರೋನಾ ಬಗ್ಗೆ ವಿಶೇಷವಾಗಿ ಜಾಗೃತಿ ಮೂಡಿಸುವ ಮೂಲಕ ಜನರ ಗಮನ ಸೆಳೆದಿದ್ದಾರೆ.

ಹೌದು, ಶುಕ್ರವಾರದಂದು ಮಧ್ಯಾಹ್ನ ಮಹಾನಗರ ಪಾಲಿಕೆ ಅಧಕಾರಿಗಳು ಒಂಟೆಗೆ ಮಾಸ್ಕ ಹಾಕಿ ನಗರದ ಪ್ರಮುಖ ಬೀದಿ ಬೀದಿಗಳಲ್ಲಿ ಸಂಚರಿಸುತ್ತಾ ಜನರು ಸರಿಯಾಗಿ ಮಾಸ್ಕ್ ಧರಿಸಬೇಕು, ಕೊರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು, ಸಾನಿಟೈಜರ್ ಬಳಸಬೇಕು ಹಾಗೂ ಸ್ವತಃ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ತಾವೇ ಬಂದ ಮಾಡಬೇಕೆಂದು ಧ್ವನಿ ವರ್ಧಕ ಮೂಲಕ ಜನರಿಗೆ ಮತ್ತಷ್ಟು ಮನಮುಟ್ಟುವಂತೆ ಜಾಗೃತಿ ಮೂಡಿಸಿದ್ದು ವಿಶೇಷವಾಗಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತರಾದ ಕೆ.ಹೆಚ್.ಜಗದೀಶ್ ಕೊರೋನಾ ವ್ಯಾಪಕವಾಗಿ ಹರಡುತ್ತಿರುವುದರಿಂದ ನಾವು ಈಗಾಗಲೇ ಅನೇಕ ರೀತಿಯಲ್ಲಿ ಜನಜಾಗೃತಿ ಮೂಡಿಸಲು ಹಲವು ರೀತಿಯಲ್ಲಿ ಕಾರ್ಯಕ್ರಮ ಮಾಡಿದ್ದೇವೆ. ಸರ್ಕಲ್ ನಲ್ಲಿರುವ ಮೂರ್ತಿಗಳಿಗೆ ಮಾಸ್ಕ್ ಹಾಕಿ ಜಾಗೃತಿ ಮೂಡಿಸಿದ್ದೇವೆ, ಬೀದಿ ಬದಿಗಳಲ್ಲಿ ಬಿತ್ತಿ ಚಿತ್ರ ಬಿಡಿಸುವ ಮೂಲಕ ಜಾಗೃತಿ ಮೂಡಿಸಿದ್ದೇವೆ.

ಇವತ್ತಿನ ಸಂದರ್ಭದಲ್ಲಿ ಮಾಸ್ಕ್ ಎಸ್ಟು ಅನಿವಾರ್ಯವಾಗಿದೆ ಎಂಬುದನ್ನು ತಿಳಿಸಲು ಇಂದು ಒಂಟೆಗೆ ಮಾಸ್ಕ್ ಹಾಕಿ ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಅಧಿಕಾರಿಗಳು, ಪೊಲೀಸ ಅಧಿಕಾರಿಗಳು ಉಪ್ಥಿತರಿದ್ದರು.

Read All News