ಕ್ರಿಕೆಟ್ ಸಾಮ್ರಾಟನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ

  • 15 Jan 2024 , 2:14 AM
  • Delhi
  • 174

ಕ್ರಿಕೆಟ್ ಸವ್ಯಸಾಚಿ, ಕ್ರಿಕೆಟ್ ದಿಗ್ಗಜ, ಗಾಡ್ ಆಪ್ ದಿ ಕ್ರಿಕೆಟ್, ಮಾಸ್ಟರ್ ಬ್ಲಾಸ್ಟರ್ ಎಂದೆ ಕರೆಸಿಕೊಳ್ಳುವ ಮತ್ತು ಅಂತರರಾಷ್ಟ್ರೀಯ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಪ್ರಸಿದ್ಧ ಭಾರತೀಯ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಇಂದು 48 ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ್ದಾರೆ.

logintomyvoice

ಸಚಿನ್ ತೆಂಡೂಲ್ಕರ್ ಈ ಹೆಸರೇ ಪ್ರೇರಕ ಸ್ಪೂರ್ತಿ. ವಿಶ್ವ ಕ್ರಿಕೆಟ್ ನ ಸಾಮ್ರಾಟನ ಬಗ್ಗೆ ಎಷ್ಟೇ ಬರೆದರೂ ಸಾಲದು. ಟೆಸ್ಟ್ ಮತ್ತು ಏಕದಿನ ಸ್ವರೂಪದಲ್ಲಿ ಪ್ರಮುಖ ರನ್ ಗಳಿಸುವವರಾಗಿ ತಮ್ಮ ವೃತ್ತಿಜೀವನವನ್ನು ಮುಗಿಸುವುದರಿಂದ ಹಿಡಿದು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕಗಳನ್ನು ಗಳಿಸುವವರೆಗೆ, ಮಾಸ್ಟರ್ ಬ್ಲಾಸ್ಟರ್ ಅವರ ಹೆಸರಿನಲ್ಲಿ ಹಲವಾರು ದಾಖಲೆಗಳಿವೆ.

logintomyvoice

ಎದುರಾಳಿ ಬೌಲರ್ ಯಾರೇ ಇರಲಿ, ಅದೇಗೆ ಕೆರಳಿಸಲಿ, ಸಚಿನ್ ಮಾತ್ರ ತಮ್ಮ ಬ್ಯಾಟ್ ಮೂಲಕವೇ ಉತ್ತರ ನೀಡುತ್ತಿದ್ದರು. ಆ ಉತ್ತರದ ಫಲವೇ ಇಂದು ಸಚಿನ್ ಹೆಸರಿನಲ್ಲಿ ಉಳಿದುಕೊಂಡಿರುವ ವಿಶ್ವದಾಖಲೆಗಳು. ಸಚಿನ್ ಸಾಧನೆ ಬಣ್ಣಿಸಲು ಪದಗಳು ಸಾಲುವುದಿಲ್ಲ. ಸಚಿನ್ ಬಣ್ಣನೆಗೆ ಯಾವುದೇ ಪದ ಬಳಸಿದರೂ ಆ ಪದ ಅವರ ಸಾಧನೆಯನ್ನು ಪೂರ್ತಿಯಾಗಿ ಪರಿಚಯಿಸುವುದಿಲ್ಲ.

logintomyvoice

ಒಬ್ಬ ವ್ಯಕ್ತಿ ಕ್ರೀಡೆಯಿಂದಲೇ ದೇವರ ಸ್ಥಾನಕ್ಕೇರುತ್ತಾರೆಂದರೆ ಅದು ಸಾಮಾನ್ಯದ ಮಾತಲ್ಲ. ಕ್ರೀಡೆಯತ್ತ ಸಚಿನ್ ಅವರಿಗಿರುವ ಬದ್ಧತೆಯನ್ನು ಯಾರು ಪ್ರಶ್ನಿಸಲಾಗದು. ಆನೆ ನಡೆದಿದ್ದೇ ದಾರಿ ಎನ್ನುವಂತೆ ಸಚಿನ್ ಎಂಬ ಅಶ್ವಮೇಧ ಓಟಕ್ಕೆ ಯಾರೂ ಕಡಿವಾಣ ಹಾಕಲು ಸಾಧ್ಯವಿಲ್ಲ. ಅವರ ದಾಖಲೆಗಳನ್ನು ಭವಿಷ್ಯದಲ್ಲಿ ಯಾರಾದರೂ ಮುರಿಯಬಹುದು.

logintomyvoice

ರನ್ ಗಳ ಶಿಖರ ಏರಿ ಕುಳಿತಿರುವ ಸೂರ್ಯ ಶಿಕಾರಿ ಸಚಿನ್. ಸಚಿನ್ ಅವರ ಒಂದೊಂದು ಹೊಡೆತಕ್ಕೂ ಅಂಗಣದಲ್ಲಿ ಪ್ರೇಕ್ಷರ ಓಹೋ ಎನ್ನುವ ಲಹರಿ. ಅದರೊಳಗೆ ಸಚಿನ್ ಗುಣಗಾನ. ಸಚಿನ್ ಬ್ಯಾಟ್ ಹಿಡಿದು ಕ್ರಿಸ್ ಗೆ ಇಳಿದರೆ ಸಾಕು. ದಾಖಲೆಗಳ ಮೇಲೆ ದಾಖಲೆಗಳು ದಾಖಲಾಗುತ್ತಾ ಹೋಗುತ್ತವೆ. ವಿಶ್ವ ಕ್ರಿಕೆಟ್‌ನಲ್ಲಿ ಸಚಿನ್ ತೆಂಡೂಲ್ಕರ್‌ಗೆ ಅಭಿಮಾನಿಗಳು ಕ್ರಿಕೆಟ್ ದೇವರು ಎಂಬ ಪಟ್ಟವನ್ನು ನೀಡಿದ್ದಾರೆ.

logintomyvoice

ಅದಕ್ಕೆ ಕಾರಣ ಸಚಿನ್ ತೆಂಡೂಲ್ಕರ್ ಕ್ರಿಕೆಟ್‌ನಲ್ಲಿ ಮಾಡಿದ ಸಾಧನೆ ಮತ್ತು ದಾಖಲೆಗಳು. ಅಂತಾ ಅದೆಷ್ಟೋ ದಾಖಲೆಗಳು ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಬ್ಯಾಟಿಂಗ್‌ನಲ್ಲಿ ಸಚಿನ್ ತೆಂಡೂಲ್ಕರ್ ಟೀಮ್ ಇಂಡಿಯಾದ ಪ್ರಮುಖ ಆಧಾರ ಸ್ತಂಭವಾಗಿದ್ದರು. ತೆಂಡೂಲ್ಕರ್ ಮಾಡಿದ ಅದೆಷ್ಟೋ ಬ್ಯಾಟಿಂಗ್ ದಾಖಲೆಗಳನ್ನು ಯಾವತ್ತಿಗೂ ಮುರಿಯಲು ಸಾಧ್ಯವೇ ಇಲ್ಲವೇನೋ ಎನಿಸಿದರೆ ತಪ್ಪಿಲ್ಲ.

Read All News