ಪಿಕೆಪಿಎಸ್ ನಲ್ಲಿಯ ತಾರತ್ಯಮ ಧೋರಣೆ ಬಗ್ಗೆ ಪ್ರತಿಭಟನೆಯ ಎಚ್ಚರಿಕೆ ಕೊಟ್ಟ ಗ್ರಾಮಸ್ಥರು

  • 27 Dec 2023 , 11:43 PM
  • Belagavi
  • 149
ಬೆಳಗಾವಿ :ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಬಡಾಲ ಅಂಕಲಗಿ ಸಹಕಾರಿ ಸಂಘದಲ್ಲಿರುವ ಸದಸ್ಯರಿಗೆ ಸಾಲ ವಿತರಣೆಯಲ್ಲಿ ತುಂಬಾ ಅನ್ಯಾಯ ಆಗುತ್ತಿದ್ದು ಕೆಲವು ಸದಸ್ಯರಿಗೆ ಉದ್ದೇಶ ಪೂರ್ವಕವಾಗಿ ಅನ್ಯಾಯ ಮಾಡುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರು ಸೇರಿ ಈ ಸಮಸ್ಯೆಯನ್ನು 15 ದಿನಗಳ ಒಳಗೆ ಸರಿಪಡಿಸದಿದ್ದರೆ ಉಗ್ರ ಹೋರಾಟಕ್ಕೆ ಕೈಗೊಳುತ್ತೇವೆಂದು ಮನವಿ ಪತ್ರ ಸಲ್ಲಿಸಿದರು. ಈ ಬಗ್ಗೆ ಮೇಲಾಧಿಕಾರಿಗಳಿಗೆ ದೂರು ನೀಡಿದರು ಇಲ್ಲಿಯವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ತಮಗೆ ಬೇಕಾದವರಿಗೆ ಹೆಚ್ಚಿನ ಸಾಲ ನೀಡಿ, ಇತರರಿಗೆ ಕಡಿಮೆ ಸಾಲ ಇಲ್ಲವೇ ಸಾಲ ನಿರಾಕರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿ ರೈತರು ಪ್ರತಿಭಟನೆ ನಡೆಸಲು ಮುಂದಾದರು. ಆದರೆ ಕೊರೋನಾ ಹಿನ್ನೆಲೆಯಲ್ಲಿ 144ನೇ ಕಲಂ ಅನ್ವಯ ನಿಷೇಧಾಜ್ಞೆ ಜಾರಿಯಲ್ಲಿರುವುದರಿಂದ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ಪೊಲೀಸರು ತಿಳಿಸಿದರು . ಹಾಗಾಗಿ ಪ್ರತಿಭಟನೆಯ ಎಚ್ಚರಿಕೆ ನೀಡಿ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಶಿದ್ದಪ್ಪ ಚಾಪಗಾವಿ, ರಾಮಗೌಡ ಪಾಟೀಲ್, ಅರ್ಜುನ್ ಅರ್ಜುನವಾಡಿ, ರಾಮಪ್ಪ ಶೀಗೆಳ್ಳಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News