ಕೊರೋನಾ ಕರಿನೆರಳಿನ ನಡುವೆಯು ಆಂಗ್ಗ ಪರೀಕ್ಷೆ ಬರೆಯಲು ಸಜ್ಜಾದ ವಿದ್ಯಾರ್ಥಿಗಳು
- 15 Jan 2024 , 2:45 AM
- Bengaluru
- 179
ಬೆಳಗಾವಿ: ಕೊರೋನಾ ಕರಿನೆರಳಿನ ನಡುವೆಯೂ ಪಿಯುಸಿ ಆಂಗ್ಲ ಪರೀಕ್ಷೆ ಬರಿಯಲು ವಿದ್ಯಾರ್ಥಿಗಳು ಸಜ್ಜಾಗಿದ್ದಾರೆ ಜಿಲ್ಲೆಯ ಒಟ್ಟು 34 ಪರೀಕ್ಷಾ ಕೇಂದ್ರಗಳಲ್ಲಿ ಇಂದು ದ್ವಿತೀಯ ಪಿಯುಸಿ ಇಂಗ್ಲೀಷ್ ಪರೀಕ್ಷೆ ನಡೆಯಲಿದೆ. ಒಟ್ಟು 28,818 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು, ಮಹಾರಾಷ್ಟ್ರ ಸೇರಿ ಬೇರೆ ರಾಜ್ಯದಿಂದ ಪರೀಕ್ಷೆ ಬರೆಯಲು ಬರುವ 71 ವಿದ್ಯಾರ್ಥಿಗಳಿಗೆ ಪಾಸ್ ವ್ಯವಸ್ಥೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ 54 ವಿಧ್ಯಾರ್ಥಿಗಳು ಬೇರೆ ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಹಾಜರ ಅಗಲಿದ್ದಾರೆ ಹಾಗೂ ಬೇರೆ ಜಿಲ್ಲೆಯ 872 ವಿದ್ಯಾರ್ಥಿಗಳು ಬೆಳಗಾವಿ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬೆರೆಯಲು ಹಾಜರಾಗಲಿದ್ದಾರೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯು ಹಾಗೂ ಸರ್ಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ. ಕೊರೊನಾ ಸೋಂಕು ನಿಯಂತ್ರಣಕ್ಕೆ ಪೂರಕವಾಗಿ ಹಲವಾರು ಸುರಕ್ಷತಾ ಕ್ರಮಗಳನ್ನು ಇಲಾಖೆ ಕೈಗೊಂಡಿದೆ.
ಎಲ್ಲ ಕೇಂದ್ರಗಳ ಒಳ ಮತ್ತು ಹೊರಗಡೆ ಸ್ಯಾನಿಟೈಸ್ ವ್ಯವಸ್ಥೆ ಮಾಡಲಾಗಿದೆ. ಇದಕ್ಕೆ ಆರೋಗ್ಯ ಇಲಾಖೆ ಮತ್ತು ಸ್ಥಳೀಯ ಆಡಳಿತದ ಸಹಕಾರ ಪಡೆದುಕೊಳ್ಳಲಾಗಿದೆ. ಪರೀಕ್ಷಾ ಕೇಂದ್ರದ ಕೊಠಡಿ ಪ್ರವೇಶಿಸುವ ಮುನ್ನ ಮಕ್ಕಳನ್ನು ಸ್ಕ್ರೀನಿಂಗ್ ಟೆಸ್ಟ್ ಮಾಡಲಾಗುವುದು. ಆರೋಗ್ಯ ಇಲಾಖೆ ಸಿಬ್ಬಂದಿ ಈ ಕಾರ್ಯ ಮಾಡಲಿದ್ದು, ಕೆಲವು ಉಪನ್ಯಾಸಕರಿಗೂ ಕೂಡ ಈ ಬಗ್ಗೆ ತರಬೇತಿ ನೀಡಲಾಗಿದೆ ಎಂದು ಪದವಿ ಪೂರ್ವ ಶಿಕ್ಷಣ ತಿಳಿಸಿದೆ.