ರಾಜ್ಯದಲ್ಲಿ ಕೊರೋನಾ ನಿಯಂತ್ರಣಕ್ಕೆ ಮಾಸ್ಕ ಡೇ ಆಚರಣೆ, ಯಡಿಯೂರಪ್ಪ

  • 14 Jan 2024 , 10:42 PM
  • Bengaluru
  • 96
ಬೆಂಗಳೂರು : ಕೊರೋನಾ ವೈರಸ್ ಮಹಾಮಾರಿ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಕೋವಿಡ್ 19 ತಡೆಗಟ್ಟಲು ರಾಜ್ಯಸರ್ಕಾರವು ಜನರಿಗೆ ಅರಿವು ಮೂಡಿಸಲು ಇಂದು ಮಾಸ್ಟ್ ಡೇ ಆಚರಿಸುತ್ತಿದೆ . ವಿಧಾನಸೌದ ಮುಂಬಾಗ ಮಾಸ್ಕ್ ಡೇ ಗೆ ಸಿಎಂ ಬಿ ಎಸ್ ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ವಿಧಾನಸೌದದಿಂದ ಕಬನ್ ಪಾರ್ಕ್ ವರೆಗು ಪಾದಯಾತ್ರೆ ಮಾಡಿ ಜನರಿಗೆ ಮಾಸ್ಕ್ ದರಿಸಿ ಎಂದು ಕರೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸಿಎಂ ಬಿಎಸ್ ವೈ ಸೋಂಕು ತಡೆಯಲು ಮಾಸ್ಟ್ ಡೇ ಆಚರಣೆ ಮಾಡಲಾಗುತ್ತಿದೆ . ಇದನ್ನು ಪ್ರತಿ ಜಿಲ್ಲೆ , ತಾಲ್ಲೂಕಿನ ಪ್ರತಿ ಹಳ್ಳಿ, ಕೇಂದ್ರಗಳಲ್ಲೂ ಆಚರಣೆ ಮಾಡಬೇಕು. ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಮಾಸ್ಕ್ ಅವಶ್ಯಕತೆ ತುಂಬಾ ಇದೆ. ಸೋಪಿನಿಂದ ಕೈ ತೊಳೆದುಕೊಳ್ಳುವುದು, ಸ್ಯಾನಿಟೇಜರ್ ಬಳಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯವಾಗಿವೆ. ಈ ಸೂಚನೆಗಳನ್ನು ಎಲ್ಲರೂ ಕಡ್ಡಾಯವಾಗಿ ಪಾಲನೆಮಾಡಬೇಕು ಎಲ್ಲರೂ ಕೋವಿಡ್ 19 ವಿರುದ್ಧ ಹೋರಾಡ ಬೇಕಾಗಿದೆ ಹಾಗೂ ಮಾಸ್ಕ್ ದರಿಸುವದು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳಲು ಹಾಗೂ ಇತರರನ್ನು ರಕ್ಷಣೆ ಮಾಡಲು ಸಹಕಾರಿ ಯಾಗಲಿದೆ ಎಂದು ಸಿಎಂ ಹೇಳಿದ್ದಾರೆ. ಈ ಸಂಬಂಧ ವಿಧಾನಸೌದದಿಂದ ಕಬ್ಬನ್ ಪಾರ್ಕ್ ವರೆಗು ಪಾದಯಾತ್ರೆ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮುಡಿಸಲಾಯಿತು. ಈ ಸಂದರ್ಭದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಆರ್ ಅಶೋಕ್, ಸಂಸದ ತೇಜಸ್ವಿಸೂರ್ಯ, ಸಿ.ಟಿ ರವಿ, ನಟಿ ರಾಗಿಣಿ, ನಟ ಪುನೀತ್ ರಾಜ್‌ಕುಮಾರ್, ಅನೀಲ ಕುಂಬ್ಳೆ, ಸಂಸದ ಪಿ.ಸಿ ಮೋಹನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Read All News