ಬೆಳಗಾವಿ :ಸಿದ್ದರಾಮಯ್ಯ ಬಡವರ ಹೆಸರಿನಲ್ಲಿ ರಾಜಕೀಯ ಮಾಡುವ ವ್ಯಕ್ತಿ. ಅವರ ಹೇಳಿಕೆಗೆ ನಾನು ಪ್ರತಿಕ್ರಯಿಸಲಾರೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಉಮೇಶ ಕತ್ತಿ ಹೇಳಿದರು.
ಆಹಾರ ಭದ್ರತೆಯ ಯೋಜನೆಯಡಿ ಕೇಂದ್ರ ಸರಕಾರದ ಅದೀನದಲ್ಲಿ ಬರುತ್ತದೆ. ನಾಲ್ಕು ಕೋಟಿ ಒಂದು ಲಕ್ಷ ಜನರಿಗೆ ಆಹಾರ ಧಾನ್ಯ ಕೊಡುವ ನಿರ್ಧಾರ ಸರಕಾರದ್ದು, ಅದು ಈ ಹಿಂದೆಯೇ ಕಾಂಗ್ರೆಸ್ ಸರಕಾರ ಮಾಡಿದ್ದು ಅದರ ಅನ್ವಯ ಆಹಾರ ಧಾನ್ಯಗಳನ್ನು ವಿತರಿಸಲಾಗುತ್ತಿದೆ ಎಂದರು.
ಆಹಾರ ಭದ್ರತೆಯಲ್ಲಿ ಐದು ಕೆ.ಜಿ.ಆಹಾರ ಧಾನ್ಯ ನೀಡುವಂತೆ ಕೇಂದ್ರ ಸರಕಾರ ಆದೇಶ ಮಾಡಿದೆ. ಅದರಂತೆ ರಾಜ್ಯ ಸರಕಾರ ಜನರಿಗೆ ನೀಡಲಾಗುತ್ತಿದೆ ಎಂದರು. ಲಾಕ್ ಡೌನ್ ಪರಿಸ್ಥಿತಿ ನಿರ್ಮಾಣವಾಗಿ ಅಕ್ಕಿ ಕಡಿಮೆ ಮಾಡಿದರೆ ನಾವು ಬದುಕೋನ ಅಥವಾ ಸಾಯೋನ ಎಂದು ಈಶ್ವರ ಎಂಬಾತ ಫೋನ್ ಮಾಡಿದಾಗ ನಾನು ಅವನು ಹೇಳಿದ ಹಾಗೆ ಹೇಳಿದ್ದೇನೆ ವಿನಃ ಉದ್ದೇಶ ಪೂರ್ವಕವಾಗಿ ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಳ ಸಂತೇಯಲ್ಲಿ ಆಹಾರ ಸಾಮಗ್ರಿ ಮಾರಾಟ ಮಾಡುವವರು ಇದನ್ನು ಮಾಡಿದ್ದಾರೆ ಎಂಬ ಅನುಮಾನ ಇದೆ ಎಂದು ಸಂಶಯ ವ್ಯಕ್ತಪಡಿಸಿದರು. ಈಗಾಗಲೇ ಸರಕಾರಿ ಅಧಿಕಾರಿಗಳಿಗೆ ಕಾಳ ಸಂತೆಯಲ್ಲಿ ಆಹಾರ ಧಾನ್ಯ ಮಾರಾಟ ಮಾಡುವವರ ಮೇಲೆ ಕ್ರಮ ಕೈಗೊಳ್ಳಲು ಸೂಚಿಸಿದ್ದೇನೆ ಎಂದರು.
ರಾಜ್ಯದ ಜನರು ಊಟ ಇಲ್ಲದೆ ಮೃತಪಡಬಾರದು. ಅವರಿಗೆ ಆಹಾರ ಧಾನ್ಯ ಪೂರೈಸುವ ಜವಾಬ್ದಾರಿ ನಮ್ಮದ್ದು. ಯಾರೂ ಹಸಿವಿನಿಂದ ಬಳಲಬಾರದು ಎಂದು ವಿನಂತಿಸಿಕೊಂಡರು.