ದಿನದ ೨೪ ಗಂಟೆ ಕಾಲ ಕೋವಿಡ್ ವಾರ್ ರೂಂ ಕೆಲಸ ಮಾಡಬೇಕು - ಬಸವರಾಜ ಬೊಮ್ಮಾಯಿ ಆದೇಶ

  • 30 Dec 2023 , 12:04 PM
  • Udupi
  • 142

ಉಡುಪಿ: ಶ್ರೀ ಬಸವರಾಜ್ ಬೊಮ್ಮಾಯಿ ಸನ್ಮಾನ್ಯ ಗೃಹ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಇಂದು ಉಡುಪಿ ಜಿಲ್ಲೆಯ ಕೋವಿಡ್ ನಿರ್ವಹಣೆಯ ಕುರಿತು ಪ್ರಗತಿ ಪರಿಶೀಲನೆ ನಡೆಸಿದರು. ಪ್ರಾರಂಭದಲ್ಲಿ ಸಭೆಯಲ್ಲಿ ಹಾಜರಿದ್ದ ಜಿಲ್ಲೆಯ ಪ್ರಮುಖ ಖಾಸಗಿ ಆಸ್ಪತ್ರೆಗಳ ಪದಾಧಿಕಾರಿಗಳೊಂದಿಗೆ ಪ್ರಸ್ತುತ ಲಭ್ಯವಿರುವ ಸೌಲಭ್ಯಗಳೊಂದಿಗೆ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ವಿಸ್ತೃತವಾಗಿ ಚರ್ಚೆ ನಡೆಸಲಾಯಿತು.

ಜಿಲ್ಲೆಯಲ್ಲಿ ವಿವಿಧ ಆಸ್ಪತ್ರೆಗಳಲ್ಲಿ ಹಾಸ್ಪಿಟಲ್ ಬೆಡ್ ಸಂಖ್ಯೆಯನ್ನು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಯಿತು. ಗ್ರಾಮ ಪಂಚಾಯತ ಮಟ್ಟದಲ್ಲಿ ವಿಲೇಜ್ ಟಾಸ್ಕ್ ಫೋರ್ಸ್ ಅನ್ನು ಸಕ್ರಿಯಗೊಳಿಸಿ ಹೋಂ ಐಸೋಲೇಶನ್ ನಲ್ಲಿರುವ ರೋಗಿಗಳ ಆರೈಕೆ ನೋಡಿಕೊಳ್ಳುವಂತೆ ಸಚಿವರು ತಿಳಿಸಿದರು. ಎರಡರಿಂದ ಮೂರು ಪಂಚಾಯತಿಗಳಿಗೆ ನೋಡಲ್ ಆಫೀಸರ್ ನೇಮಕ ಮಾಡುವಂತೆ ಸೂಚಿಸಿದರು.

ತಾಲೂಕಿಗೊಂದರಂತೆ ಕೂಡಲೇ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸುವ ಅಗತ್ಯತೆ ಬಗ್ಗೆ ಸಚಿವರು ತಿಳಿಸಿದರು. ಆಕ್ಸಿಜನ್ ಮತ್ತು ರೆಮಿಡಿಸಿವಿಯರ್ ಸಾಕಷ್ಟು ದಾಸ್ತಾನು ಇಡುವಂತೆ ತಿಳಿಸಲಾಯಿತು ಅಲ್ಲದೆ ಎಕ್ಸ್ಪರ್ಟ್ ಕಮಿಟಿಯಿಂದ ಅಡಿಟ್ ಮಾಡಿಸುವಂತೆ ಸೂಚಿಸಿದರು. ವ್ಯಾಕ್ಸಿನೇಷನ್ ಕೊರತೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿ ಎರಡನೇ ಬಾರಿಯ ಲಸಿಕೆಗೆ ಆದ್ಯತೆ ನೀಡಲು ಸೂಚಿಸಿದರು.

ಆಕ್ಸಿಜನ್ ರೆಮಿಡಿಸಿವಿಯರ್ ಹಾಗೂ ವ್ಯಾಕ್ಸಿನ್ ಪೂರೈಕೆಗೆ ಎಲ್ಲಾ ಪ್ರಯತ್ನ ಮಾಡುವುದಾಗಿ ಸಚಿವರು ಭರವಸೆ ನೀಡಿದರು. ವಾರ್ ರೂಮ್ ದಿನದ 24*7 ಕೆಲಸ ಮಾಡುವಂತೆ ತಿಳಿಸಿದರು. ಕೊರೊನಾ ವಿರುದ್ಧ ಯುದ್ಧ ಆರಂಭವಾಗಿದ್ದು ಇನ್ನೂ ಎರಡು ಮೂರು ವಾರಗಳ ಕಾಲ ಎಲ್ಲ ಇಲಾಖೆಗಳು ಸಮನ್ವಯತೆಯಿಂದ ಒಗ್ಗಟ್ಟಾಗಿ ಹೋರಾಡಿ ಜಯ ಗಳಿಸಬೇಕಾಗಿದೆ, ಒಟ್ಟಾರೆಯಾಗಿ ಜವಾಬ್ದಾರಿಯುತ ಜಿಲ್ಲಾಡಳಿತ ಆಗಬೇಕಾಗಿದೆ ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಕಾರ್ಕಳ ಶಾಸಕರಾದ ಶ್ರೀ ಸುನಿಲ್ ಕುಮಾರ್, ಉಡುಪಿ ಶಾಸಕರಾದ ಶ್ರೀ ರಘುಪತಿ ಭಟ್, ಕಾಪು ಶಾಸಕರಾದ ಶ್ರೀ ಲಾಲಾಜಿ ಆರ್ ಮೆಂಡನ್, ಬೈಂದೂರು ಶಾಸಕರಾದ ಶ್ರೀ ಸುಕುಮಾರ ಶೆಟ್ಟಿ, ವಿಧಾನಪರಿಷತ್ ಸದಸ್ಯರಾದ ಶ್ರೀ ಪ್ರತಾಪ್ ಚಂದ್ರ ಶೆಟ್ಟಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಪೊಲೀಸ್ ಐಜಿ, ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ವಿವಿಧ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Read All News