ಬೆಳಗಾವಿ ಉಪಚುನಾವಣೆ; ಮಂಗಳಾ ಅಂಗಡಿ ಗೆಲುವು

  • 14 Jan 2024 , 9:43 PM
  • Belagavi
  • 91

ಬೆಳಗಾವಿ: ದಿ. ಸುರೇಶ ಅಂಗಡಿ ನಿಧನದಿಂದ ತೆರವಾಗಿದ್ದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಮಂಗಳಾ ಅಂಗಡಿ ಅವರನ್ನು ಕಣಕ್ಕಿಳಿದರೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಯಮನಕರಡಿ ಶಾಸಕ ಸತೀಶ್ ಜಾರಕಿಹೊಳಿ ಕಣಕ್ಕಿಳಿದಿದ್ದರು ಕಾಂಗ್ರೆಸ್ -ಬಿಜೆಪಿ ಅಭ್ಯರ್ಥಿಗಳು ನಡುವೆ ನೇರ ಪೈಪೋಟಿ ನೀಡಲಾಗಿತ್ತು.

ಅಭ್ಯರ್ಥಿಗಳಿಗೆ ಚಾಲೆಂಜ್ ಹಾಕಲು ಎಂಇಎಸ್ ಕೂಡ ಶುಭಂ ಶೆಲ್ಕೆ ಅವರನ್ನು ಕಣಕ್ಕಿಳಿಸಿತ್ತು ಇಂದಿನ ಮತ ಎಣಿಕೆಯಲ್ಲಿ ಎಂಇಎಸ್ ಅಭ್ಯರ್ಥಿಗೆ ಮುಖಭಂಗ ಆಗಿದ್ದು. ಶುಭಂ ಗೆ ಮಹಾರಾಷ್ಚ್ರ ಪರ ಸಂಘಟನೆಗಳು ಬೆಂಬಲ ನೀಡಿದ್ದವು. ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ 18 ಲಕ್ಷ ಮರಾಠಿಗರಿದ್ದಾರೆ. ಶೆಲ್ಕೆ ಬೆಳಗಾವಿ ಗ್ರಾಮೀಣ ಭಾಗದ ಕಡೆ ತಮ್ಮ ಗಮನ ಕೇಂದ್ರೀಕರಿಸಿದ್ದರು ಉತ್ತರ, ದಕ್ಷಿಣ ವಿಧಾನ ಸಭೆ ಕ್ಷೇತ್ರಗಳಲ್ಲಿ ಸುಮಾರು 8 ಲಕ್ಷಕ್ಕೂ ಹೆಚ್ಚು ಮತದಾರರಿದ್ದಾರೆ ಆದರೆ ಅವರು ಯಾರು ಎಂಇಎಸ್ ಗೆ ದೊಡ್ಡ ಬೆಂಬಲ ನೀಡಿಲ್ಲ ಎಂಬುದು ಈ ಫಲಿತಾಂಶದಲ್ಲಿ ಸ್ಪಷ್ಟವಾಗಿದೆ.

ಮರಾಠಾ ಮತಗಳ ಮೇಲೆ ಕಣ್ಣು ಹಾಕಿದ್ದ ಎಂಇಎಸ್ ಹಾಗೂ ಶಿವಸೇನೆಗೆ ಮುಖಭಂಗವಾಗಿದ್ದು ಆದರೆ ಬಿಜೆಪಿ ವೋಟ್ ಗಳು ಒಡೆದು ಕಾಂಗ್ರೆಸ್ ಗೆ ಲಾಭವಾಗುತ್ತೆ ಎಂಬ ಕೈ ನಾಯಕರ ಲೆಕ್ಕಾಚಾರ ಉಲ್ಟಾ ಆಗಿದಂತರು ಸತ್ಯ. ಕಾಂಗ್ರೆಸ್ ನ ಸತೀಶ ಜಾರಕಿಹೊಳಿ ವಿರುದ್ಧ ಬಿಜೆಪಿಯ ಮಂಗಲಾ ಅಂಗಡಿ ಗೆಲುವಿನ ನಗೆ ಬಿರಿದ್ದಾರೆ. ಈ ವರೆಗೂ ಗೆಲುವು ಪಕ್ಕಾ ಎಂದು ಹೇಳುತ್ತಿದ್ದ ಸತೀಶ ಜಾರಕಿಹೊಳಿಗೆ ಕೊನೆಗೂ ಬಿಜೆಪಿ ಭದ್ರಕೋಟೆಯನ್ನು ಕೈ ವಶ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್ ಸ್ಥಿತಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವ ಪರಸ್ಥಿತಿ ಇದ್ದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಸೋತು ಸುಣ್ಣವಾಗಿದೆ. ಜಿಲ್ಲೆಯಲ್ಲಿ ಸತತವಾಗಿ ಎಂದರೆ 1998, 2004, 2009, 2013, 2018ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಸತತವಾಗಿ ಕ್ಷೇತ್ರದಲ್ಲಿ ಗೆದ್ದಿದ್ದ ಇತಿಹಾಸ ಇತ್ತು.

ಈ ಪೈಕಿ ಸುರೇಶ ಅಂಗಡಿ ನಾಲ್ಕು ಸಲ ಗೆದ್ದರೆ, ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ಒಮ್ಮೆ ಲೋಕಸಭೆಗೆ ಆಯ್ಕೆಯಾಗಿದ್ದರು. ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು ಪಕ್ಷಕ್ಕೆ ಉತ್ತಮ ಹಿಡಿತವನ್ನು ಕಾಪಾಡಿ ಕೊಂಡಿಲ್ಲ ಇದು ಮಂಗಳಾ ಅಂಗಡಿ ಅವರಿಗೆ ಪ್ರಯಾಸದ ಗೆಲುವಾಗಿದೆ ಎಂಬುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.

Read All News