ನೂತನ ಸಂಸದೆ ಮಂಗಳ ಅಂಗಡಿಗೆ ಅಭಿನಂದನೆ ತಿಳಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕಾರಜೋಳ

  • 14 Jan 2024 , 11:47 PM
  • Belagavi
  • 98

ಬೆಳಗಾವಿ :ಅತ್ಯಂತ ರೋಚಕ ತಿರುವು ಪಡೆದ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮಂಗಳ ಅಂಗಡಿಯವರು ಜಯಭೇರಿ ಭಾರಿಸಿದ್ದು, ಎಲ್ಲಾ ಮತದಾರ ಬಂದುಗಳಿಗೆ ಅಭಾರಿಯಾಗಿದ್ದು, ಮಂಗಳ ಅಂಗಡಿ , ಎಲ್ಲಾ ಕಾರ್ಯಕರ್ತರಿಗೆ , ಮುಖಂಡರನ್ನು ಅಭಿನಂದಿಸುವುದಾಗಿ ಡಿಸಿಎಂ, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ ಕಾರಜೋಳ ತಿಳಿಸಿದ್ದಾರೆ.

ಅತ್ಯಂತ ಪ್ರತಿಷ್ಠೆಯ ಈ ಚುನಾವಣೆಯಲ್ಲಿ, ಬಿಜೆಪಿ ಜಯ ಸಾಧಿಸುವುದರೊಂದಿಗೆ ಕೇಂದ್ರದಲ್ಲಿ ಶ್ರೀ ನರೇಂದ್ರ ಮೋದಿಜಿ ಮತ್ತು ರಾಜ್ಯದಲ್ಲಿ ಶ್ರೀ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಜನಪರ ಕಾರ್ಯಕ್ರಮಗಳೊಂದಿಗೆ ಜನರ‌ಮನ ಗೆದ್ದಿದ್ದು, ಜನ ನಮ್ಮ ಪರವಾಗಿದ್ದಾರೆ ಎಂದು ಎಂಬುದು ಸಾಬೀತಾಗಿದೆ.

ಬೆಳಗಾವಿಯ ಮತದಾರ ಪ್ರಭುಗಳು ಮಂಗಳ ಅವರನ್ನು ಜಯಶೀಲರನ್ನಾಗಿಸಿ, ಅವರ ಪತಿ ದಿವಂಗತ ಸುರೇಶ್ ಅಂಗಡಿ ಅವರಿಗೆ ನಿಜವಾದ ಗೌರವ ಸೂಚಿಸಿದ್ದಾರೆ. ಮಂಗಳ ಅಂಗಡಿ ಅವರಿಗೆ ಹಾರ್ದಿಕ ಅಭಿನಂದನೆಗಳು. ಅವರು ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸಲಿದ್ದಾರೆ. ಮುಂದೆ ಉತ್ತಮ ಸಾಧನೆಗಳು ಹೊರಹೊಮ್ಮಲಿ ಎಂದು ನಾನು ಶುಭ ಹಾರೈಸುತ್ತೇನೆ ಎಂದಿದ್ದಾರೆ.

ಈ ಅಭೂತಪೂರ್ವ ಜಯ ತಂದುಕೊಟ್ಟ ಮತದಾರರಿಗೆ ಮತ್ತು ಈ ಚುನಾವಣೆಯಲ್ಲಿ ಶ್ರಮಿಸಿದ ಎಲ್ಲ ಬಿಜೆಪಿ ಮುಖಂಡರಿಗೆ ಮತ್ತು ಕಾರ್ಯಕರ್ತರಿಗೆ ಹಾರ್ದಿಕ ವಂದನೆಗಳನ್ನು ಡಿಸಿಎಂ ಸಲ್ಲಿಸಿದ್ದಾರೆ.

Read All News