ಉಪ ಚುನಾವಣೆ ಗೆದ್ದು ನೂತನ ಇತಿಹಾಸ ರಚಿಸಿದ ಮಂಗಲಾ ಅಂಗಡಿ

  • 14 Jan 2024 , 9:57 PM
  • Belagavi
  • 152

ಬೆಳಗಾವಿ: ಲೋಕಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದಿರುವ ಬಿಜೆಪಿ ಅಭ್ಯರ್ಥಿ ಹಾಗೂ ದಿವಂಗತ ಸುರೇಶ ಅಂಗಡಿ ಪತ್ನಿ ಮಂಗಳಾ ಅಂಗಡಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದ ಪ್ರಥಮ ಮಹಿಳಾ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

logintomyvoice

ಈ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಇದುವರೆಗೂ ಸಹ ಒಬ್ಬ ಮಹಿಳೆಯೂ ಲೋಕಸಭಾ ಸದಸ್ಯೆಯಾಗಿ ಆಯ್ಕೆಯಾಗಿಲ್ಲ ಎಂಬ ಕೊರಗು ಕಾಡುತ್ತಿತ್ತು. ಮೊದಲ ಬಾರಿಗೆ ಬಿಜೆಪಿಯ ಮಂಗಳಾ ಅಂಗಡಿ ಅದಕ್ಕೆ ಪೂರ್ಣ ವಿರಾಮ ಇಟ್ಟಿದ್ದಾರೆ. ಈ ಲೋಕಸಭೆ ಕ್ಷೇತ್ರದಲ್ಲಿ 1957 ರಿಂದ 2019ರವರೆಗೆ ಜರುಗಿದ 17 ಚುನಾವಣೆಗಳಲ್ಲಿ ಯಾವುದೇ ಪಕ್ಷದಿಂದ ಮಹಿಳಾ ಅಭ್ಯರ್ಥಿಗಳು ಜಯವಾಗಲು ಸಾಧ್ಯವಾಗಿಲ್ಲ .

logintomyvoice

ಅದಲ್ಲದೆ ಕ್ಷೇತ್ರದಲ್ಲಿ 55 ವರ್ಷದ ಬಳಿಕ 2014 ರ ಚುನಾವಣೆಯಲ್ಲಿ ಸದ್ಯ ಗ್ರಾಮೀಣ ಕ್ಷೇತ್ರದ ಶಾಸಕಿಯಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸ್ಪರ್ಧಿಸಿ ಸೋಲನು ಅನುಭವಿಸಿದ್ದನ್ನು ಇಲ್ಲಿ ನೆನೆಯಬಹುದು. ಪ್ರಸಕ್ತ ಚುನಾವಣೆಯಲ್ಲಿ ಮಹಿಳಾ ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಬೇಕು ಎಂದು ಮಹಿಳೆಯರ ಒತ್ತಾಯ, ಅನುಕಂಪದ ಅಲೆ, ಬಿಜೆಪಿಯ ಅಭಿವೃದ್ಧಿ ಕಾರ್ಯಗಳು, ದಿ. ಸುರೇಶ ಅಂಗಡಿಯವರ ಜನಪ್ರಿಯತೆ ಇವೆಲ್ಲವೂ ಮೊದಲ ಭಾರಿಗೆ ಮಂಗಲಾ ಅಂಗಡಿ ಅವರನ್ನು ಗೆಲುವಿನ ದಡ ಸೇರಿಸಿವೆ.

logintomyvoice

ಬೆಳಗಾವಿ ಲೋಕಸಭೆ ಕ್ಷೇತ್ರದ ಪ್ರಥಮ ಮಹಿಳಾ ಸಂಸದೆ ಎಂಬ ಹೆಗ್ಗಳಿಕೆಗೆ ಮಂಗಲಾ ಪಾತ್ರರಾಗಿದಷ್ಟೇ ಅಲ್ಲದೆ ಸ್ವಾತಂತ್ರ್ಯ ಸಿಕ್ಕ ಬಳಿಕ ಪ್ರಥಮ ಬಾರಿಗೆ ಬೆಳಗಾವಿ ಕ್ಷೇತ್ರದಿಂದ ಜಯಸಾಧಿಸಿದ ಮಹಿಳೆ ಎಂಬ ದಾಖಲೆಯು ಮಂಗಲಾ ಅವರಿಗೆ ಸಲ್ಲುತ್ತದೆ. ಚನ್ನಮ್ಮನ ಅಸ್ಥಾನದಲ್ಲಿ ಮೊದಲ ಬಾರಿಗೆ ಮಹಿಳೆಗೆ ಅವಕಾಶ ಸಿಕ್ಕಿದ್ದು ಸಂತಸವನ್ನುಂಟು ಮಾಡಿದೆ.

Read All News