ಮಹಾರಾಷ್ಟ್ರದಲ್ಲಿ ಮಳೆ : ಕೃಷ್ಣಾ ನದಿಗೆ ಹರಿದು ಬರುತ್ತಿದೆ 26 ಸಾವಿರ ಕ್ಯುಸೆಕ್ ನೀರು – 3 ಬ್ಯಾರೇಜ್ ಗಳು ಮುಳುಗಡೆ

  • 15 Jan 2024 , 3:17 AM
  • Belagavi
  • 183
ಮಹಾರಾಷ್ಟ್ರ ಕೊಂಕಣ ಪ್ರದೇಶದಲ್ಲಿ ಮಳೆಯ ಅಬ್ಬರ ಶುರುವಾಗಿದ್ದು, ತಾಲ್ಲೂಕಿನಲ್ಲಿ ಕೃಷ್ಣಾ ಮತ್ತು ಉಪನದಿಗಳ ನೀರಿನ ಒಳಹರಿವಿನಲ್ಲಿ ಹೆಚ್ಚಳ ಉಂಟಾಗಿದ್ದು, ನದಿಗೆ ಅಡ್ಡಲಾಗಿರುವ ಬ್ಯಾರೇಜ್ ಗಳು ಮುಳುಗಡೆಯಾಗಿವೆ.

ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಕ್ಷಣಕ್ಷಣಕ್ಕೂ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಕೃಷ್ಣಾ ನದಿಗೆ ೧೫ ಸಾವಿರ ಕ್ಯುಸೆಕ್ ಮತ್ತು ದೂಧಗಂಗಾ ಮತ್ತು ವೇದಗಂಗಾ ನದಿಗೆ ಒಟ್ಟು ೧೧ ಸಾವಿರ ಕ್ಯುಸೆಕ್ ಸೇರಿದಂತೆ ತಾಲ್ಲೂಕಿನ ಕಲ್ಲೋಳ ಬಳಿ‌ ಕೃಷ್ಣಾ ನದಿಗೆ ೨೬ ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ.

ಪರಿಣಾಮವಾಗಿ ತಾಲ್ಲೂಕಿನ ಕಾರದಗಾ- ಭೋಜ ಗ್ರಾಮಗಳ ಮಧ್ಯೆ ದೂಧಗಂಗಾ ನದಿಗೆ ಅಡ್ಡಲಾಗಿರುವ ಬ್ಯಾರೇಜ್, ಮಲಿಕವಾಡ-ದತ್ತವಾಡ ಮತ್ತು ವೇದಗಂಗಾ ನದಿಗೆ ಆಡ್ಡಲಾಗಿರುವ ಬೋಜವಾಡಿ-ಕುನ್ನೂರ, ಅಕ್ಕೋಳ- ಸಿದ್ನಾಳ ಬ್ಯಾರೇಜ್ ಮುಳುಗಡೆಯಾಗಿವೆ. ಈ ಗ್ರಾಮಗಳಿಗೆ ಪರ್ಯಾಯ ರಸ್ತೆ ಸಂಪರ್ಕವಿದೆ. ಇನ್ನೂ ಜಿಲ್ಲಾಡಳಿತ, ತಾಲೂಕಾಡಳಿತದವರು ನದಿ ತೀರದ ಪ್ರದೇಶಗಳಲ್ಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಿದ್ಧತೆ ನಡೆಸಿದ್ದಾರೆ. ತೀರದ ಜನರಿಗೆ ಈಗಾಗಲೇ ನಡುಕ ಭೀತಿ ಉಂಟಾಗಿದೆ.

Read All News