ಬೆಳಗಾವಿ :ಲೋಕಸಭಾ ಉಪಚುನಾವಣೆಯಲ್ಲಿ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ 200 ರು. ನೋಟಿನ ಪ್ರಭಾವ ಕಾಂಗ್ರೆಸ್ ಗೆ ಬಿರಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಮಂಗಳವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಗೋಕಾಕ ವಿಧಾನಸಭಾ ಕ್ಷೇತ್ರದದ ಉತ್ತರದ ಭಾಗದಲ್ಲಿ ಸ್ವಲ್ಪ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ.
ಕಾಂಗ್ರೆಸ್ ಮತದಾರರು ಕಾಂಗ್ರೆಸ್ ಗೆ ಮತ ಹಾಕಿದ್ದಾರೆ. ಆದರೆ ಕೆಲ ಕಡೆಗಳಲ್ಲಿ 200 ರು. ನೋಟಿನ ಪ್ರಭಾವದಿಂದ ಅಲ್ಲಿ ಲೋಕಸಭಾ ಉಪಚುನಾವಣೆಲ್ಲಿ ಹಿನ್ನಡೆಯಾಗಲು ಕಾರಣವಾಯಿತು. ಹಣ ನೀಡದೆ ಇದ್ದರೂ ಗೋಕಾಕ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ನೆಕ್ಟ್ ಟು ನೆಕ್ಟ್ ಫೈಟ್ ಕೊಟ್ಟಿದ್ದೇವೆ. ನಾವು ಹಣ ನೀಡದೆ ಕಾಂಗ್ರೆಸ್ ಕಾರ್ಯಕರ್ತರು ಉತ್ಸಾಹದಿಂದ ಕೆಲಸ ಮಾಡಿದ್ದು ವರದಾನವಾಗಿದೆ ಎಂದು ಹೇಳಿದರು. ಬಹು ನಿರೀಕ್ಷಿತ ಬೆಳಗಾವಿ ಲೋಕಸಭಾ ಉಪಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಗೆಲವು ಸಾಧಿಸುತ್ತಾರೆ ಎಂದು ನಿರೀಕ್ಷೆ ಇತ್ತು.
ಕಡಿಮೆ ಮತಗಳ ಅಂತರದಲ್ಲಿ ಸೋಲು ಕಂಡಿದ್ದೇವೆ. ಇದು ಕಾಂಗ್ರೆಸ್ ಗೆಲವು. ಬಿಜೆಪಿ ಸೋಲು ಎಂದು ಬಿಜೆಪಿಯಲ್ಲಿಯೇ ಮಾತನಾಡಿಕೊಳ್ಳುತ್ತಿದ್ದಾರೆ ಎಂದರು. ಈ ಚುನಾವಣೆಯಲ್ಲಿ ಸೋಲು ಕಂಡಿದ್ದು ಮೈನಸ್ ಆಗಿದೆ. ವೈಯಕ್ತಿಕವಾಗಿ ಪಕ್ಷಕ್ಕೆ ಸಾಕಷ್ಟು ಲಾಭವಾಗಿದೆ. ಕಾಂಗ್ರೆಸ್ ಬೇರು ಮಟ್ಟದಲ್ಲಿ ಗಟ್ಟಿಗೊಳಿಸಲು ಈ ಚುನಾವಣೆ ಸಾಕ್ಷಿಯಾಗಿದೆ.
ಈ ಚುನಾವಣೆಯಲ್ಲಿ ನಾವು ಸೋಲು ಕಂಡರೂ ಗೆಲವು ಸಾಧಿಸಿದ್ದೇವೆ ಎಂದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಹಾಲಿ, ಮಾಜಿ ಶಾಸಕರು ಚುನಾವಣೆಯಲ್ಲಿ ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಸ್ವಯಂ ಪ್ರೇರಣೆಯಿಂದ ಮತದಾರರು ಕಾಂಗ್ರೆಸ್ ಗೆಲ್ಲಿಸಲು ಪ್ರಯತ್ನ ನಡೆಸಿದರು. ಅಲ್ಲದೆ ಚಿಕ್ಕೋಡಿ ಭಾಗದ ಜನರು ಇಲ್ಲಿಗೆ ಬಂದು ಪ್ರಚಾರ ನಡೆಸಿದ್ದು ವಿಶೇಷವಾಗಿತ್ತು ಎಂದು ಹೇಳಿದರು.
ಬೆಳಗಾವಿ ಲೋಕಸಭಾ ಉಪಚುನಾವಣೆ ರಾಜ್ಯ ವಿಧಾನ ಸಭಾ ಕೋವಿಡ್ ನಿರ್ವಹಣೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರ ಸಂಪೂರ್ಣ ವೈಫಲ್ಯವಾಗಿದೆ. ಚಾಮರಾಜನಗರದಲ್ಲಿ ಸಾವು ನೋವಿಗೆ ಯಾರು ಕಾರಣ ಎಂದು ಪ್ರಶ್ನಿಸಿದರು. ಆಕ್ಸಿಜನ್ ಹಾಗೂ ರೇಮಡಿಸಿವರ್ ಲಸಿಕೆ ರಾಜ್ಯದಲ್ಲಿಯೇ ಕೊರತೆ ಇದೆ.
ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದರು. ಮಾಜಿ ಎಂಎಲ್ ಸಿ ವೀರಕುಮಾರ ಪಾಟೀಲ, ಕಾಂಗ್ರೆಸ್ ಮುಖಂಡರಾದ ರಾಜೇಂದ್ರ ಪಾಟೀಲ, ವಿನಯ ನಾವಲಗಟ್ಟಿ , ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.