ಕೊವೀಡ್ ನಿರ್ವಹಣೆಗೆ ಜಿಲ್ಲಾಉಸ್ತುವಾರಿ ಹೆಗಲಿಗೆ: ಸಿಎಂ ಯಡಿಯೂರಪ್ಪ

  • 14 Jan 2024 , 9:37 PM
  • Belagavi
  • 79

ಬೆಂಗಳೂರು:  ಕರೋನಾ ದಂಧೆ ನಡೆಸಿದರೇ ಕಠಿಣ ಕ್ರಮ ಸದ್ಯ ರಾಜ್ಯದಲ್ಲಿ ಲಾಕ್ ಡೌನ್ ಇಲ್ಲ: ಮೇ.12ರವರೆಗೆ ಜನತಾ ಕರ್ಫ್ಯೂ ಮಾತ್ರ ಬೆಂಗಳೂರು ರಾಜ್ಯದಲ್ಲಿ ಕೋವಿಡ್-19 ಮರ‍್ನಾಲ್ಕು ಪಟ್ಟು ಹೆಚ್ಚಾಗುತ್ತಿದೆ. ಇದನ್ನು ನಿಯಂತ್ರಣ ತರಲು ಸಚಿವ ಸಂಪುಟದಲ್ಲಿ ಚರ್ಚೆ ಮಾಡಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವರುಗಳು ಜಿಲ್ಲೆಗಳಿಗೆ ತೆರಳಿ ಅಲ್ಲಿನ ಸಮಸ್ಯೆಯ ಬಗ್ಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವಂತೆ  ಸೂಚನೆ ನೀಡಲಾಗಿದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಮಂಗಳವಾರ ಬೆಂಗಳೂರಿನಲ್ಲಿ ಸಚಿವ ಸಂಪುಟದ ಸಭೆಯ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಜ್ಯದಲ್ಲಿ ಆಕ್ಸಿಜನ್, ಬೆಡ್, ರೆಮಡಿಸಿವರ್‌ಗಳ ಬಗ್ಗೆ ಸಚಿವರ ಕೆಳಗಿನ ಸಚಿವರಿಗೆ ಕೊಡಲಾಗಿದೆ.

ಜಗದೀಶ ಶೆಟ್ಟರ್ ಆಕ್ಸಿಜನ್ ನಿವಾರಣೆ ಮಾಡಲು ಕೇಂದ್ರದೊಂದಿಗೆ  ನಿರಂತರವಾಗಿ ಸಂಪರ್ಕ ಮಾಡಿ ರಾಜ್ಯದಲ್ಲಿ ಆಕ್ಸಿಜನ್ ಬೇಡಿಕೆಯನ್ನು ಸರಿದೂಗಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದೇನೆ. ರೆಮಡಿಸಿವರ್‌ಗಳ ಕೊರತೆ ನೀಗಿಸಲು ಡಿಸಿಎಂ ಅಶ್ವಥ ನಾಯರಣ ಅವರಿಗೆ ಸೂಚಿಸಿದ್ದೇನೆ.

ಖಾಸಗಿ ಆಸ್ಪತ್ರೆ ಹಾಗೂ ಸರಕಾರಿ ಬೆಡ್‌ಗಳ ಸಮಸ್ಯೆಯ ಬಗೆಹರಿಸಲು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್. ಅಶೋಕಗೆ ಜವಾಬ್ದಾರಿ ನೀಡಲಾಗಿದೆ. ವಾರ್ ರೂಮ್ ಹಾಗೂ ಕಾಲ್ ಸೆಂಟರ್ ನಿರ್ವಹಣೆ ಮಾಡಲು ಸಚಿವ ಅರವಿಂದ ಲಿಂಬಾವಳಿಗೆ ಜವಾಬ್ದಾರಿ ನೀಡಲಾಗಿದೆ.

ನೆರೆಯ ಮಹಾರಾಷ್ಟ್ರದಲ್ಲಿ  ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದು, ಆಕ್ಸಿಜನ್ ಸರಬರಾಜಯ ಮಾಡುವಂತೆ ಕೇಂದ್ರ ಸರಕಾರ ಸೂಚಿಸಬೇಕೆಂದು ವಿನಂತಿಸಿದ್ದು, ಅದನ್ನು ಸರಬರಾಜು ಮಾಡಿಸುವಂತೆ ಕೇಂದ್ರ ಸರಕಾರ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದರು.

ಚಾಮರಾಜ ನಗರದ ಕೊರೋನಾಗೆ ಸೋಂಕಿತರ 24 ಜನರ ಸಾವಿಗೆ ವಿಷಾಧ ವ್ಯಕ್ತಪಡಿಸುತ್ತೇನೆ. ಅದರ ಸೂಕ್ತ ತನಿಖೆಗೆ ಐಎಎಸ್ ಅಧಿಕಾರಿ ಶಿವಯೋಗಿ ಕಳಸದ ಅವರಿಗೆ ಜವಾಬ್ದಾರಿ ನೀಡಲಾಗಿದೆ.

Read All News