ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ಆನ್ ಲೈನ್ ಶಿಕ್ಷಣ ರದ್ದುಪಡಿಸಿ ಎಂದು ವಾಟಾಳ ನಾಗರಾಜ್ ಪ್ರತಿಭಟನೆ
- 15 Jan 2024 , 6:15 AM
- Belagavi
- 112
ಬೆಳಗಾವಿ: ಎಸ್.ಎಸ್.ಎಲ್.ಸಿ ಪರೀಕ್ಷೆ ಹಾಗೂ ಆನ್ ಲೈನ್ ಶಿಕ್ಷಣ ರದ್ದುಗೊಳಿಸುವಂತೆ ಪ್ರತಿಭಟನೆ ಆಗ್ರಹಿಸಿ ಇಂದು ಬೆಳಗಾವಿ ಸುವರ್ಣ ಸೌದ ಮುಂದೆ ಹೋರಾಟಕ್ಕೆ ಮುಂದಾಗಿದ್ದ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ ಪೋಲಿಸ್ ರು ವಶಕ್ಕೆ ಪಡೆದಿದ್ದಾರೆ ಎಸ್ ಎಸ್ ಎಲ್ ಸಿ ಪರೀಕ್ಷೆ ರದ್ದು ಮಾಡುವಂತೆ ವಿಭಿನ್ನವಾಗಿ ಪ್ರತಿಭಟನೆ ಮುಂದಾಗಿದ್ದರು ಬಳಿಕ ಮಾತನಾಡಿದ ಅವರು , 9 ಲಕ್ಷ ವಿದ್ಯಾರ್ಥಿಗಳು ಹಾಗೂ ಕುಟುಂಬದ ಸೇರಿದ್ರೆ 25 ಲಕ್ಷ ಆಗುತ್ತೆ ಅವರ ಪ್ರಾಣದ ಜೋತೆ ಚಲ್ಲಾಟವಾಡುತ್ತಿರುವ ಸರ್ಕಾರದ ವಿರುದ್ಧ ಹರಿಹೈದರು. ಶಿಕ್ಷಣ ಸಚಿವರನ್ನು ತಾರಾಟೆಗೆ ತೆಗೆದುಕೊಂಡು ಸಚಿವ ಸುರೇಶಕುಮಾರ ಹಠಕ್ಕೆ ಬಿದ್ದು ಎಸ್ . ಎಸ್.ಎಲ್.ಸಿ ಪರೀಕ್ಷೆ ಮಾಡಲು ಹೊರಟಿದ್ದಾರೆ. ಕೊರೋನಾ ಕೇಸ್ ಗಳು ಕಡಿಮೆ ಇದ್ದ ವೇಳೆ ಲಾಕ್ ಡೌನ್ ಮಾಡಿದ್ದರು. ಕೊರೋನಾ ಅಟ್ಟಹಾಸ ಮೆರೆಯುವ ವೇಳೆ ಓಪನ್ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.
ದೇಶದಲ್ಲಿ 12 ರಾಜ್ಯಗಳಲ್ಲಿ ಪರೀಕ್ಷೆ ಇಲ್ಲದೆ ವಿದ್ಯಾರ್ಥಿಗಳನ್ನು ಪಾಸ್ ಮಾಡಿದ್ದಾರೆ. ಎಸ್ ಎಸ್ ಎಲ್ ಸಿ ಪರೀಕ್ಷೆ ನಂತರ ಮೌಲ್ಯಮಾಪನ ಮಾಡುವ ಶಿಕ್ಷಕರ ಭವಿಷ್ಯದ ಪ್ರಶ್ನೆ ಎದುರಾಗಿದೆ. ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸದೇ ವಿದ್ಯಾರ್ಥಿಗಳನ್ನ ಪಾಸ್ ಮಾಡಬೇಕು . ಪ್ರಾಥಮಿಕ ಹಂತದಿಂದ ಡಿಗ್ರಿಯವರೆಗೂ ಆನ್ ಲೈನ್ ಶಿಕ್ಷಣ ಮಾಡುವುದು ಬೇಡ ಎಂದು ಆಗ್ರಹಿಸಿದರು . ಕರ್ನಾಟಕವನ್ನು ಅಮೇರಿಕಾ ಮಾಡಲು ಆಗಲ್ಲ. ಕೊರೋನಾ ವೈರಸ್ ವೇಳೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿಲ್ಲ. ಒಬ್ಬ ವಿದ್ಯಾರ್ಥಿಗೆ 50 ಲಕ್ಷ ಹಾಗೂ ಉಪಾಧ್ಯಾಯರಿಗೆ 25 ಲಕ್ಷ ಠೇವಣಿ ಇಡಬೇಕು.
ರಾಜ್ಯದಲ್ಲಿ 8000 ಸೋಂಕಿತರು ಇದ್ದು ಸಾವಿಬ ಸಂಖ್ಯ 100 ಆಗಿದೆ ಒಂದು ವೇಳೆ ಪರೀಕ್ಷೆ ರದ್ದು ಮಾಡದಿದಲ್ಲಿ ಇದೇ ತಿಂಗಳು 23 ರಂದು ಸರೇಶ ಕುಮಾರ್ ಮನೆಮುಂದೆ ಸತ್ಯಾಗ್ರಹ ಮಾಡುವದಾಗಿ ಎಚ್ಚರಿಕೆ ನೀಡಿದರು ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷಾ ಮಂಡಳಿ ಮುಂದೆ ಧರಣಿ ಮಾಡುತ್ತೇನೆ ಹೀಗಾಗಿ ಪರೀಕ್ಷೆಗಳನ್ನ ನಡೆಸುವುದು ಸರಿಯಲ್ಲ ಎಂದು ಸರ್ಕಾರ ಇದ್ದಕ್ಕೆ ಸುಕ್ತ ಕ್ರಮ ತೆಗೆದುಕೊಳ್ಳದಿದ್ದಲ್ಲಿ ತೀವ್ರ ಹೋರಾಟ ಮಾಡುವದಾಗಿ ಬೆಳಗಾವಿಯಲ್ಲು ಕನ್ನಡ ಪರ ಹೋರಾಟಗಾರ ವಾಟಾಳ ನಾಗರಾಜ ಹೇಳಿಕೆ ನೀಡಿದರು.ಹೀರೆಬಾಗೇವಾಡಿ ಟೂಲ್ ಹತ್ತಿರ ಪೋಲಿಸರು ವಾಟಾಳ ನಾಗರಾಜರನ್ನು ವಶಕ್ಕೆ ಪಡೆದಿದ್ದಾರೆ.