ಬೆಳಗಾವಿ :ಬೆಳಗಾವಿಯಲ್ಲಿ ಕರೋನಾ ಎರಡನೇ ಅಲೆಯ ರಣಕೇಕೆಗೆ ಗುರುವಾರ 843 ಪ್ರಕರಣಗಳು ದಾಖಲಾಗಿದ್ದು ಓರ್ವ ಸೋಂಕಿತ ಕೊರೋನಾಗೆ ಬಲಿಯಾಗಿದ್ದಾನೆ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರಿಗೆ ಸರಿಯಾಗಿ ಆಕ್ಸಿಜನ್ ಸಿಗುತ್ತಿಲ್ಲ ಎನ್ನುವ ಆರೋಪ ಕೊರೋನಾ ಸೋಂಕಿನ ಕೇಳಿಬರುತ್ತಿದೆ. ರಾಜ್ಯ ಸರಕಾರ ಜನತಾ ಕರ್ಫ್ಯೂ ಘೋಷಣೆ ಮಾಡಿದರೂ ಜನರು ಬೇಕಾಬಿಟ್ಟಿಯಾಗಿ ಸಂಚಾರ ನಡೆಸುತ್ತಿರುವುದು ಕೊರೋನಾ ಸೋಂಕಿನ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಗುರುವಾರಒಂದೇ ದಿನ 843 ಕೊರೋನಾ ಸೋಂಕಿತರು ಪತ್ತೇಯಾಗಿದ್ದು ಓರ್ವ ಮೃತಪಟ್ಟಿದ್ದಾನೆ . ಅಥಣಿಯಲ್ಲಿ 24, ಬೆಳಗಾವಿ ತಾಲೂಕಿನಲ್ಲಿ 395, ಬೈಲಹೊಂಗನಲ್ಲಿ 54, ಚಿಕ್ಕೋಡಿಯಲ್ಲಿ 24, ಗೋಕಾಕನಲ್ಲಿ 122, ಹುಕ್ಕೇರಿಯಲ್ಲಿ 21, ಖಾನಾಪುರನಲ್ಲಿ 38, ರಾಮದುರ್ಗದಲ್ಲಿ 64, ರಾಯಬಾಗದಲ್ಲಿ 44,ಸವದತ್ತಿಯಲ್ಲಿ 45 ಹಾಗೂ ಇತರೆ ಕಡೆಯಲ್ಲಿ 13 ಪ್ರಕರಣ ದಾಖಲಾಗಿವೆ. ಕೊರೋನಾ ಸೋಂಕಿನ ವಿರುದ್ದ ಹೋರಾಟ ನಡೆಸಿದ್ದ ಬೆಳಗಾವಿಯ 66 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ.