ಗೋಕಾನಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಆಗಬೇಕು: ಶಾಸಕ ರಮೇಶ

  • 14 Jan 2024 , 10:13 PM
  • Belagavi
  • 78

ಗೋಕಾಕ :ಲಾಕ್‌ಡೌನ್ ಕಟ್ಟುನಿಟ್ಟಾಗಿ ಆಗಬೇಕು. ಗ್ರಾಮದಿಂದ ಜನರು ನಗರಕ್ಕೆ ಬರಬಾರದು, ನಗರದ ಜನ ಗ್ರಾಮಕ್ಕೆ ಹೋಗಬಾರದು ತಾಲೂಕಿನಲ್ಲಿ ಕೊರೋನಾ ಸೋಂಕಿನ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಶಾಸಕ ರಮೇಶ ಜಾರಕಿಹೊಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೋವಿಡ್-19 ನಿಯಂತ್ರಣ ಮಾಡುವ ಕುರಿತು ಗೋಕಾಕನಲ್ಲಿ ಶನಿವಾರ ತಾಲೂಕಾಧಿಕಾರಿಗಳ ಜೊತೆ ಸಭೆ ನಡೆಸಿದ ಅವರು, ಗೋಕಾಕನಲ್ಲಿ ಕೊರೋನಾ ವೈರಸ್ ತಡಗಟ್ಟುವಲ್ಲಿ ಎಲ್ಲ ಅಧಿಕಾರಿಗಳ ಕೈ ಜೋಡಿಸಬೇಕು. ವಿನಾಕಾರಣ ಜನರು ಹೊರಗಡೆ ಬರುವುದನ್ನು ನಿಲ್ಲಿಸಿ ಕೊರೋನಾ ಮುಕ್ತ ಗೋಕಾಕ ಮಾಡಲು ಸಂಕಲ್ಪ ತೊಡಬೇಕೆಂದರು.

Read All News