ಮಳಿಗೆ ತಪಾಸಣೆ ನಡೆಸಿ 66,000 ರೂ.ಗಳ ಅಭಿಸಂದಾನದ ದಂಡ ವಸೂಲಿ

  • 15 Jan 2024 , 2:25 AM
  • Kalaburagi
  • 112

ಕಲಬುರಗಿ :ಕೊವೀಡ್-19 ಸಂದರ್ಭದಲ್ಲಿ ಕಲಬುರಗಿ ಕಾನೂನು ಮಾಪನಶಾಸ್ತ್ರ ಇಲಾಖೆಯಿಂದ ದಿನಸಿ ಪದಾರ್ಥ ಹಾಗೂ ಇತರೆ ದಿನನಿತ್ಯದ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಹಾಗೂ ಪೊಟ್ಟಣ ಸಾಮಗ್ರಿ ಅಧಿನಿಯಮ 2011ರ ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆ ಹಾಗೂ ವಿವಿಧ ತಾಲೂಕುಗಳಲ್ಲಿನ ಕಿರಾಣ ಬಜಾರ, ಸುಪುರ ಮಾರ್ಕೇಟ್, ಎ.ಪಿ.ಎಂ.ಸಿ. ನೆಹರು ಗಂಜಿನ ಸಟಗು ಹಾಗೂ ರಿಟೇಲ್ (ಚಿಲ್ಲರೆ) ವ್ಯಾಪಾರಸ್ಥರ ಮಳಿಗೆಗಳಿಗೆ ಏಪ್ರಿಲ್ 28 ರಿಂದ ಮೇ 8 ರವರೆಗೆ ತಪಾಸಣೆ ನಡೆಸಿ ವ್ಯಾಪಾರಸ್ಥರ ವಿರುದ್ಧ ಕ್ರಮ ಕೈಗೊಂಡು ದಂಡ ವಸೂಲಿ ಮಾಡಲಾಗಿದೆ ಎಂದು ಕಲಬುರಗಿ ಕಾನೂನು ಮಾಪನಶಾಸ್ತ ಇಲಾಖೆಯ ಸಹಾಯಕ ನಿಯಂತ್ರಕರಾದ ರಫೀಕಸಾಬ್ ಲಾಡಜಿ ಅವರು ತಿಳಿಸಿದ್ದಾರೆ.

ಕಲಬುರಗಿ ಕಾನೂನು ಮಾಪನಶಾಸ್ತ್ರಇಲಾಖೆಯ ಸಹಾಯಕ ನಿಯಂತ್ರಕರಾದ ರಫೀಕಸಾಬ್ ಲಾಡಜಿ ಹಾಗೂ ನಿರೀಕ್ಷಕರುಗಳಾದ ಅನಿಲಸಿಂಗ್, ಜಯರಾಜ್ ಸಿಂಗ್ ಹಾಗೂ ಅಶ್ವಥ ಜಿ. ಪತ್ತಾರ ಇವರನ್ನೊಳಗೊಂಡ ತಂಡವು ಏಪ್ರಿಲ್ 28 ರಿಂದ ಮೇ 7 ರವರೆಗೆ 84 ತಪಾಸಣೆ ನಡೆಸಿ 25 ಮೊಕದ್ದಮೆ ಹೂಡಿ 66,000 ರೂ.ಗಳ ಅಭಿಸಂಧಾನದ ದಂಡ ವಸೂಲಿ ಮಾಡಿರುತ್ತಾರೆ.

ಸಾರ್ವಜನಿಕರು ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಕಲಬುರಗಿ ಕಾನೂನು ಮಾಪನಶಾಸ್ತç ಇಲಾಖೆಯ ಕಚೇರಿಯ ದೂರವಾಣಿ ಸಂಖ್ಯೆ 08472-295856ಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.

Read All News