ಬೆಳಗಾವಿ :ಕೊರೋನಾ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಸರಕಾರ ವಿಧಿಸಿರುವ ಲಾಕ್ ಡೌನ್ ನಿಯಮ ಉಲ್ಲಂಘಿಸುವವರಿಗೆ ಪೊಲೀಸರು ವಾಹನ ಸೀಜ್ ಮಾಡಿ ಚುರುಕು ಮುಟ್ಟಿಸಿದರು.
ವಿನಾಕಾರಣ ವಾಹನಗಳನ್ನು ತೆಗೆದುಕೊಂಡು ರಸ್ತೆಗೆ ಬಂದವರನ್ನು ವಾಹನ ಸೀಜ್ ಮಾಡಿ ಕಳುಸತ್ತಿರುವ ದೃಶ್ಯ ಕಂಡು ಬಂದಿತ್ತು.
ವಾಹನ ಸವಾರರು ಕೆಲ ನೆಪಗಳನ್ನು ಹೇಳಿದರೂ ಪೊಲೀಸರು ಮಾತ್ರ ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ. ಆದ್ದರಿಂದ ಸಾರ್ವಜನಿಕರು ಸರಕಾರದ ಲಾಕ್ ಡೌನ್ ಉಲ್ಲಂಘನೆ ಮಾಡದಂತೆ ಪೊಲೀಸರು ವಿನಂತಿಸಿಕೊಳ್ಳುತ್ತಿದ್ದಾರೆ. ಹೊರಗಡೆ ಬಂದರೆ ವಾಹನ್ ಸೀಜ್ ಆಗುವುದು ಗ್ಯಾರಂಟಿ.