ಮಂಡ್ಯ ಜಿಲ್ಲಾಡಳಿತದ ಕಾರ್ಯಕ್ಕೆ ಎಲ್ಲಡೆ ಶ್ಲಾಘನೀಯ

  • 15 Jan 2024 , 1:07 AM
  • Mandya
  • 176

ಮಂಡ್ಯ: ತಾಲ್ಲೂಕಿನ ಉಮ್ಮಡಹಳ್ಳಿ ಒಕ್ಕಲಿಗರ ಸಮುದಾಯ ಭವನ,ಒಕ್ಕಲಿಗರ ವಿದ್ಯಾರ್ಥಿನಿಲಯ,ಕೋವಿಡ್ ಕೇರ್ ಸೆಂಟರ್ -1 ಇಲ್ಲಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ವತಿಯಿಂದ ಕೋವಿಡ್ ಸೋಂಕಿತರಿಗೆ ಹೆಲ್ತ್ ಕಿಟ್ ನ್ನು ವಿತರಿಸಲಾಯಿತು.

ಇದೊಂದು ರಾಜ್ಯಕ್ಕೆ ಮಾದರಿಯಾಗಬಲ್ಲ ವಿನೂತನ ಹೆಜ್ಜೆ ಎಂಬ ಭರವಸೆ ಜಿಲ್ಲಾಡಳಿತದ್ದು, ಈ ಮೂಲಕ ಸೋಂಕಿತರಲ್ಲಿ ಕೋವಿಡ್ ನ್ನು ಹಿಮ್ಮೆಟಿಸುವ ಚೈತನ್ಯ ತುಂಬಿದೆ. ಈ ಮೂಲಕ ಜಿಲ್ಲಾಡಳಿತ ಸೋಂಕಿತರು ಗುಣಮುಖರಾಗಿ ಹೊರಬರಲು ಅಗತ್ಯ ಮೂಲಸೌಕರ್ಯಗಳನ್ನು ಸುವ್ಯವಸ್ಥಿತವಾಗಿ ಒದಗಿಸಿದೆ ಎಂದು ಸೋಂಕಿತರು ಅಭಿಪ್ರಾಯ ಪಟ್ಟಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಹಾಗೂ ಸೋಂಕಿತರ ಆರೋಗ್ಯದ ದೃಷ್ಟಿಯಿಂದ ಇಡೀ ರಾಜ್ಯದಲ್ಲಿ ಮಂಡ್ಯ ಜಿಲ್ಲೆ ಹೆಲ್ತ್ ಕಿಟ್ ನೀಡುತ್ತಿರುವುದರಲ್ಲಿ ಮೊದಲು ಎಂಬುವುದು ಗಮನಾರ್ಹವಾಗಿದೆ.

ಈ ಹೆಲ್ತ್ ಕಿಟ್ ನಲ್ಲಿ ಒಂದು ಸೆಟ್ ಬೆಡ್, ಬೆಡ್ ಶೀಟ್, ಬಕೆಟ್, ಸ್ಯಾನಿಟೈಸರ್ , 7 ದಿನಕ್ಕೆ ಮಾಸ್ಕ್ ಜೊತೆಗೆ ಇನ್ನಿತರ ಅವಶ್ಯಕ ವಸ್ತುಗಳನ್ನು ನೀಡಲಾಗುತ್ತಿದ್ದು ಇದರ ಮೂಲಕ ಸೋಂಕಿತರ ಆರೋಗ್ಯದ ಜೊತೆ, ಕೋವಿಡ್ ಹರಡುವುದನ್ನು ತಡೆಗಟ್ಟಲು ಸಹಕಾರಿಯಾಗಿದೆ.

Read All News