ದೆಹಲಿ :ಕೇಂದ್ರ ಸರ್ಕಾರ ಕೆಲವು ಕಾರಣಾಂತರಗಳಿಂದ ಮೂಲ ಪಬ್‌ಜಿ ಮೊಬೈಲ್ ಇಂಡಿಯಾವನ್ನು ಸೆಪ್ಟೆಂಬರ್ 2020 ರಲ್ಲಿ ನಿಷೇಧಿಸಿತ್ತು.
ಪಬ್ ಜಿ ಮೊಬೈಲ್ ಇಂಡಿಯಾ ಇತ್ತೀಚೆಗೆ ತನ್ನ ಅವತಾರವನ್ನು ಬ್ಯಾಟಲ್‌ಗ್ರೌಂಡ್ಸ್ ಮೊಬೈಲ್ ಇಂಡಿಯಾ ಎಂದು ಬದಲಾಯಿಸಿಕೊಂಡಿದೆ ಮತ್ತು ಅದರ ಡೆವಲಪರ್ ಕ್ರಾಫ್ಟನ್ ಬಹು ನಿರೀಕ್ಷಿತ್ ಪೂರ್ವ-ನೋಂದಣಿ ಮೇ 18 ರಂದು ನೇರ ಪ್ರಸಾರವಾಗಲಿದೆ ಎಂದು ತಿಳಿಸಿದ್ದಾರೆ.
ಪೂರ್ವ-ನೋಂದಣಿ ಗೂಗಲ್ ಪ್ಲೇ ಆಪ್ ಸ್ಟೋರ್ ಮೂಲಕ ಪ್ರಾರಂಭವಾಗುತ್ತದೆ, ಮತ್ತು ಆಸಕ್ತ ಅಭಿಮಾನಿಗಳು "ಪೂರ್ವ-ನೋಂದಣಿ" ಬಟನ್ ಕ್ಲಿಕ್ ಮಾಡಿ ನೋಂದಣಿ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಮೂಲ ಪಬ್ ಜಿ ಮೊಬೈಲ್ ಇಂಡಿಯಾದಂತೆಯೇ,ಬ್ಯಾಟಲ್ ಗ್ರೌಂಡ್ ಇ ಮೊಬೈಲ್ ಇಂಡಿಯಾ ಆಟವು ಉಚಿತ ಮತ್ತು ಭಾರತೀಯ ಪ್ರೇಕ್ಷಕರಿಗಾಗಿ ಕೆಲವು ಟ್ವೀಕ್‌ಗಳೊಂದಿಗೆ ಡೆವೆಲಪ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.