ಕೆಎಲ್‌ಇ ಮಹಿಳಾ ಘಟಕದ ಉಪಕ್ರಮ: ಬೆಳಗಾವಿಯಲ್ಲಿ ಸಿದ್ಧವಾಯ್ತು ಕೋವಿಡ ಐಸೋಲೇಶನ್ ಕೇಂದ್ರ

  • 14 Jan 2024 , 9:36 PM
  • Belagavi
  • 106

ಬೆಳಗಾವಿ: ದೇಶದ ಜನತೆಯನ್ನು ತಲ್ಲಣಗೊಳಿಸುತ್ತಿರುವ ಮಹಾಮಾರಿ ಕೋವಿಡ್ ಸೋಂಕಿನ ವಿರುದ್ಧದ ಸಮಯರಕ್ಕೆ ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲೀಕರಣ ಕೇಂದ್ರವು ಕೈ ಜೋಡಿಸಿದೆ. ಕೋವಿಡ್ ರೋಗಿಗಳ ಆರೈಕೆಗಾಗಿ ಕೆ.ಎಲ್.ಇ ಲಿಂಗರಾಜ್ ಕ್ಯಾಂಪಸ್ ನಲ್ಲಿ ಐಸೋಲೇಶನ್ ಕೇಂದ್ರ ತೆರೆದಿದೆ.

ಜಿಲ್ಲೆಯಲ್ಲಿ ಕೋವಿಡ್ ಉಲ್ಬಣಗೊಂಡಿದ್ದು, ಇತ್ತ ಆಸ್ಪತ್ರೆಗಳಲ್ಲಿ ಬೆಡ್ ಅಭಾವ ಕೂಡ ಕಾಡುತ್ತಿದೆ. ಸೋಂಕಿನ ಕಡಿಮೆ ಗುಣಲಕ್ಷಣವುಳ್ಳವರನ್ನ ಐಸೋಲೇಶನ್ ಗೆ ಒಳಪಡಿಸಲು ಕೂಡ ಸಮಸ್ಯೆಯಾಗುತ್ತದೆ. ಇದನ್ನ ಮನಗಂಡಿರುವ ಕೆ ಎಲ್ ಇ ಮಹಿಳಾ ಘಟಕ, ಕೈಗೆಟುಕುವ ದರದಲ್ಲಿ 50 ಬೆಡ್ ಗಳ ಕೋವಿಡ್ ಕೇಂದ್ರ ಪ್ರಾರಂಭಿಸಿದೆ.

ಜ್ಯೂಮ್ ತಂತ್ರಜ್ಞಾನ ಸದುಪಯೋಗ :ಈ ಕೇಂದ್ರದಲ್ಲಿ ಉಳಿಯುವ ರೋಗಿಗಳ ಹಾಗೂ ಸಂಬAಧಿಕರ ಜೊತೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಜ್ಯೂಮ್ ಆ್ಯಪ್ ಬಳಸಲಾಗುತ್ತ್ತಿದೆ. ಸಂಬAಧಿಕರಿಗೆ ಹಾಗೂ ರೋಗಿಗಳಿಗೆ ಕೇಂದ್ರದಲ್ಲಿರುವ ಎರಡು ಪ್ರತ್ಯೇಕ ಕೊಠಡಿಯಲ್ಲಿ ಜ್ಯೂಮ್ ಆ್ಯಪ್ ಬಳಸುವ ವ್ಯವಸ್ಥೆ ಮಾಡಲಾಗಿದೆ. ಪ್ರತಿ ನಿತ್ಯ ಮನೆಯವರ ಜೊತೆ ಮಾತನಾಡುವ ಅವಕಾಶ ಮಾಡಿಕೊಡಲಾಗುತ್ತಿದೆ. ಇದರಿಂದ ರೋಗಿ ಹಾಗೂ ಅವರ ಸಂಬAಧಿಕರ ಮಾನಸಿಕ ಸ್ಥೈರ್ಯ ಹೆಚ್ಚಿಸುವ ಪ್ರಯತ್ನ ಮಾಡುತ್ತಿದೆ.

ಗುಣಮಟ್ಟದ ಆಹಾರ ಮತ್ತು ಯೋಗ:

ಇಲ್ಲಿ ದಾಖಲಾಗುವವರಿಗೆ ಆರೋಗ್ಯಯುತ ಹಾಗೂ ಗುಣಮಟ್ಟದ ಮುಂಜಾನೆ, ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಹೊತ್ತು ಊಟ ಮತ್ತು ಸಂಜೆ ಚಹಾ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕೋವಿಡ್ ಸೋಂಕಿನಿAದ ಬಳಲುತ್ತಿರುವವರ ಮಾನಸಿಕ ಸ್ಥೈರ್ಯ ಕುಂದದAತೆ ನೋಡಿಕೊಳ್ಳಲು ಯೋಗಾಸನ ಹೇಳಿ ಕೊಡಲಾಗುತ್ತದೆ.

ಇನ್ನುಳಿದಂತೆ ತರಬೇತಿ ಪಡೆದ ನೂರಿತ ವೈದ್ಯರಿಂದ ದಿನದ 24 ಗಂಟೆಗಳ ಕಾಲ ಆರೈಕೆ ವ್ಯವಸ್ಥೆ ಮಾಡಲಾಗುತ್ತದೆ. ಬಿಪಿ ಹಾಗೂ ಶುಗರ್ ಚೆಕ್ ಮಾಡಲಾಗುತ್ತದೆ. ಆಂಬ್ಯುಲೆನ್ಸ್ ವ್ಯವಸ್ಥೆ ಇದೆ..

ಆಕ್ಸಿಜನ್ ಬೆಡ್ ಸೌಲಭ್ಯ ಇಲ್ಲ :

ಇದು ಐಸೋಲೇಶನ್ ಕೇಂದ್ರವಾಗಿರುವುದರಿAದ ಆಕ್ಸಿಜನ್ ಬೆಡ್ ವ್ಯವಸ್ಥೆ ಇರುವುದಿಲ್ಲ. ಕಡಿಮೆ ಗುಣಲಕ್ಷಣಗಳನ್ನು ಹೊಂದಿರುವವರ ಆರೈಕೆ ಮಾತ್ರ ಮಾಡಲಾಗುತ್ತಿದೆ. ಹೆಚ್ಚಿನ ಮಾಹಿತಿಗಾಗಿ+918197671803 / +919986631942 ಗೆ ಸಂಪರ್ಕಿಸಬಹುದು ಎಂದು ಕೆ.ಎಲ್.ಇ. ಸ್ವಶಕ್ತಿ ಮಹಿಳಾ ಸಬಲೀಕರಣ ಘಟಕ ಪತ್ರಿಕಾ ಪ್ರಕಟಣೆ ಮೂಲಕ ತಿಳುಹಿಸಿದೆ.

Read All News