ಸಾಂಬ್ರಾದಲ್ಲಿ ವಿಮಾನ ಹಾರಾಟ ರದ್ದು

  • 15 Jan 2024 , 12:35 AM
  • Belagavi
  • 108

ಬೆಳಗಾವಿ :ತೌಕ್ತೆ ಚಂಡಮಾರುತದ ಪರಿಣಾಮ ಬೆಳಗಾವಿ ಜಿಲ್ಲೆಯಲ್ಲಿಯೂ ಜೋರಾಗಿ ಗಾಳಿ, ಮಳೆ ಸುರಿಯುತ್ತಿರುವುದರಿಂದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟವನ್ನು ಸ್ಥಗೀತಗೊಳಿಸಲಾಗಿದೆ ಎಂದು ಸಾಂಬ್ರಾ ವಿಮಾನ ನಿಲ್ದಾಣದ ನಿರ್ದೇಶಕ ರಾಜೇಶಕುಮಾರ ಮೌರ್ಯ ಟ್ವಿಟ್ ಮಾಡಿದ್ದಾರೆ.

ವಿಮಾನ ಹಾರಾಟಕ್ಕೆ ಅನಕೂಲವಾಗಿರದ ವಾತಾವರಣದಿಂದ ಹೈದ್ರಾಬಾದ್ ಹಾಗೂ ತಿರುಪತಿ ವಿಮಾನಗಳ ಹಾರಾಟ ರದ್ದಾಗಿದೆ. ವಾತಾವರಣವನ್ನು ಪರಿಶೀಲನೆ ಮಾಡಿದ ಬಳಿಕ ಮುಂದಿನ ವಿಮಾನ ಹಾರಾಟದ ಬಗ್ಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಸೂಚನೆಯ ಪ್ರಕಾರ ಕ್ರಮ ಕೈಗೊಳ್ಳಲು ನಿರ್ದೇಶಕರು ತಿಳಿಸಿದ್ದಾರೆ.

Read All News