ಉಮಾಪತಿ ಈಗ ಪೊಲೀಸರ ಅತಿಥಿ

  • 15 Jan 2024 , 3:58 AM
  • Kolar
  • 231

ಕೋಲಾರ: ಅಕ್ಕ-ತಂಗಿಯನ್ನು ಮದುವೆಯಾಗುವ ಮೂಲಕ ಇಡಿ ರಾಜ್ಯದಾದ್ಯಂತ ಸುದ್ದಿಯಾಗಿದ್ದ ಉಮಾಪತಿ ಈಗ ಪೊಲೀಸರ ಅತಿಥಿಯಾಗಿದ್ದೇನೆ. ಮೇ.07 ರಂದು ಕೋಲಾರದ ಉಮಾಪತಿ ಎಂಬುವ ಅಕ್ಕ ಹಾಗೂ ತಂಗಿಯನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದ ಸುದ್ದಿ ಹಾಗೂ ಇವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು.

ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಅವರು ಘಟನೆಯ ಬಗ್ಗೆ ವಿಚಾರಣೆ ನಡೆಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ವಿಚಾರಣೆ ನಡೆಸಿದ ಪೊಲೀಸರಿಗೆ ಇಬ್ಬರು ಸಹೋದರಿಯರಲ್ಲಿ ತಂಗಿ ಇನ್ನು ಅಪ್ರಾಪ್ತೆ ಎಂಬುವುದು ತಿಳಿದು ಬಂದಿತ್ತು, ಈ ಸಂಬಂಧ ಪೊಲೀಸರು ವರ ಉಮಾಪತಿ ಸೇರಿದಂತೆ ಏಳು ಮಂದಿಯ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದ್ದಾರೆ.

ಮನೆಯ ಹೆಣ್ಣು ಮಕ್ಕಳಿಬ್ಬರನ್ನು ಮದುವೆಯಾಗ ಬೇಕು ಎಂದು ವಧುವಿನ ತಂದೆ ಬೇಡಿಕೆ ಇಟ್ಟ ಎಂಬ ಕಾರಣಕ್ಕೆ ವರ ಮದುವೆಗೆ ಒಪ್ಪಿಗೆ ಸೂಚಿಸಿದ್ದ ಎನ್ನಲಾಗಿದೆ.

Read All News