ಕೊವ್ಯಾಕ್ಸಿನ್ ಎರಡನೇ ಡೋಸ್‌ಗೆ ಸಾರ್ವಜನಿಕರ ಪರದಾಟ

  • 30 Dec 2023 , 12:10 PM
  • Belagavi
  • 121

ಬೆಳಗಾವಿ :ಆರಂಭದಲ್ಲಿ ಕೊವ್ಯಾಕ್ಸಿನ್ ಹಾಕಿಸಿಕೊಳ್ಳಲು ಕೊರೋನಾ ವಾರಿರ‍್ಸ್ ಸಹ ಹಿಂದೇಟು ಹಾಕುತ್ತಿದ್ದರು. ಈಗ ಜನರೇ ಮುಂದೆ ಬಂದು ನಮಗೆ ಲಸಿಕೆ ಕೊಡಿ ಎನ್ನುತ್ತಿದ್ದಾರೆ. ಆದರೆ ಲಸಿಕೆ ನೀಡಲು ಆರೋಗ್ಯ ಇಲಾಖೆಯ ಬಳಿ ಅಗತ್ಯದಷ್ಟು ಸಂಗ್ರಹ ಇಲ್ಲ.

ಇದರಿಂದ ಎರಡನೇ ಡೋಸ್ ಪಡೆಯಲು ನಿತ್ಯ ಪರದಾಟ ಪ್ರಾರಂಭವಾಗಿದೆ. ಆರೋಗ್ಯ ಕೇಂದ್ರಗಳ ಮುಂದೆ ಜನ ಲಸಿಕೆಗಾಗಿ ಕಾದು ಕೂಡು ದೃಶ್ಯ ಸಾಮಾನ್ಯವಾಗಿದೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿತ್ಯ 50ಕ್ಕಿಂತ ಕಡಿಮೆ ಡೋಸ್ ಪೂರೈಸಲಾಗುತ್ತಿದೆ.

50ಕ್ಕಿಂತ ಹೆಚ್ಚು ಜನರಿದ್ದರೇ ಹಿಂದಿರುಗಿ ಹೋಗಿ ಮತ್ತೆ ನಾಳೆ ಬನ್ನಿ ಎನ್ನುವ ಉತ್ತರ ವೈದ್ಯರಿಂದ ಸಿಗುತ್ತಿದೆ. ಒಂದು ವೇಳೆ ಮರುದಿನವೂ ತಡವಾಗಿ ಬಂದಲ್ಲಿ ಲಸಿಕೆ ಸಿಗುವುದೇ ಅನುಮಾನ ಎನ್ನುವಂತಿದೆ ಸ್ಥಿತಿ. ಇನ್ನೂ ಲಸಿಕೆ ಪಡೆಯಲು ಬರುವ ಜನ ಗುಂಪು ಗುಂಪಾಗಿ ನಿಲ್ಲುತ್ತಾರೆ.

ಅಲ್ಲಿ ಸಾಮಾಜಿಕ ಅಂತರ ಕೂಡ ಮಾಯವಾಗುತ್ತಿದೆ. ಕೊವ್ಯಾಕ್ಸಿನ್ ಅಥವಾ ಕೋವಿಶೀಲ್ಡ್ ಹಾಕಿಸಿಕೊಂಡವರು ಆರರಿಂದ ಎಂಟು ವಾರದೊಳಗೆ ಎರಡನೇ ಡೋಸ್ ಹಾಕಿಸಿಕೊಳ್ಳಬೇಕು ಎಂದು ತಿಳಿಸಲಾಗಿತ್ತು. ಮೊದಲ ಹಂತದಲ್ಲಿ ನೋಂದಣಿಸಿ ಮಾಡಿಕೊಂಡ ಅವವರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಲಾಗುತ್ತಿತ್ತು.

ಆದರೆ ಈಗ ಅದನ್ನು ನಿಲ್ಲಿಸಲಾಗಿದೆ. ಸರಕಾರವೇ ಸ್ಪಷ್ಟವಾಗಿ ಹೊಸಬವರಿಗೆ ಕೊವ್ಯಾಕ್ಸಿನ್ ಇಲ್ಲ ಎಂದು ತಿಳಿಸಿರುವ ಕಾರಣ ಎರಡನೇ ಡೋಸ್ ಮಾತ್ರ ಪಡೆಯಬೇಕಿದೆ. ಯಾವ ದಿನಾಂಕಕ್ಕೆ ಮೊದಲ ಡೋಸ್ ಪಡೆದಿದ್ದರು ಎಂಬ ವಿವರ ಆರೋಗ್ಯ ಇಲಾಖೆಯ ಬಳಿಯಿದ್ದು, ಅದರ ಆಧಾರದ ಮೇಲೆ ಟೋಕನ್ ನೀಡಲಿ, ಲಸಿಕೆ ಪಡೆಯುವ ದಿನ ತಿಳಿಸಿದರೆ ಅದೇ ದಿನ ನಾವು ಹೋಗುತ್ತೇವೆ.

ನಮಗೂ ನಿತ್ಯ ಅಲೆಯುವುದ ತಪ್ಪಲಿದೆ ಎಂಬುದು ಸಾರ್ವಜನಿಕರ ಅನಿಸಿಕೆ. ಇನ್ನೂ ಲಸಿಕೆ ಎಲ್ಲಿ ಬೇಕಾದರೂ ಪಡೆಯಬಹುದಾಗಿದ್ದು, ಆ ಭಾಗದ ಜನ ಈ ಕಡೆ ಈ ಭಾಗದ ಜನ ಆ ಕಡೆ ಓಡಾಡುವ ಪ್ರಸಂಗ ಎದುರಾಗಿದೆ.

Read All News