ಕೊರೋನಾ ವಾರಿಯರ್ಸ್ ಗೆ ಸನ್ಮಾನ
- 2 Jan 2024 , 8:00 AM
- Belagavi
- 95
ಬೆಳಗಾವಿ: ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಹೋರಾಡಿದ ವಾರಿಯರ್ಸ್‌ಗಳಿಗೆ ನಾಗರಿಕ ವೇದಿಕೆ ಕುಡಚಿ ಹಾಗೂ ಕುಡಚಿ ಸೌಂರಕ್ಷಣಾ ಕಮೀಟಿ ಸರ್ವ ಧರ್ಮ ಸಮಾನ ಇವರಿಂದ ಅದ್ಧೂರಿ ಸತ್ಕಾರ ಸಮಾರಂಭ ವನ್ನು ಏರ್ಪಡಿಸಲಾಗಿತ್ತು.
ಕುಡಚಿ ಪಟ್ಟಣದಲ್ಲಿ ಕಳೆದ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ಕುಡಚಿ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ೨೫ ಜನ ಕೊರೊನಾ ಸೊಂಕಿತರು ಪತ್ತೆಯಾದ ಹಿನ್ನಲೆಯಲ್ಲಿ ಒಂದುವರೆ ತಿಂಗಳ ಕಾಲ ಇಡಿ ಪಟ್ಟಣವನ್ನೆ ಸಿಲ್ ಡೌನ ಮಾಡಲಾಗಿತ್ತು ಇದರಿಂದ ಸರ್ಕಾರಕ್ಕು ಕೂಡಾ ತಲೆನೊವುವಾಗಿ ಪರಿಣಮಿಸಿತ್ತು ಇದರಿಂದ ಇಡಿ ದೇಶದ ಚಿತ್ತ ಕುಡಚಿ ಯತ್ತ ಇದ್ದಿತ್ತು ಇವತ್ತು ಎಷ್ಟು ನಾಳೆ ಎಷ್ಟು ಎಂಬ ಪರಿಸರ ನಿರ್ಮಾಣವಾಗಿತ್ತು ಕುಡಚಿ ಹೆಸರು ಹೇಳಿದರೆ ಸಾಕು ಪಕ್ಕದ ಊರಿನ ಜನ ದೂರ ಸರಿದು ನಿಲ್ಲುವ ಪರಿಸ್ಥಿತಿ ಉದ್ದಭವಗೊಂಡಿತ್ತು. ಸೂತ್ತಮೂತ್ತಲಿನ ಹತ್ತೂರಿಗೆ ವ್ಯಾಪಾರ ಕೆಂದ್ರವಾಗಿದ್ದ ಕುಡಚಿ ಜನರಿಲ್ಲದೆ ಭಿಕೊ ಎನ್ನುತ್ತಿತ್ತು ಸಂಪೂರ್ಣ ಹಣಕಾಸಿನ ವಹಿವಾಟು ನಿಂತು ಹೋಗಿ ತುತ್ತು ಅಣ್ಣಕ್ಕಾಗಿ ನೀರಿಗಾಗಿ ಪರದಾಡುವ ವಾತಾವರಣ ಸೃಷ್ಟಿಯಾಗಿತ್ತು.
ಆದರೆ ಇದ್ದಕೆಲ್ಲ ಹೆದರದೆ ಕುಡಚಿ ಪಟ್ಟಣವನ್ನು ಕೊರೊನಾ ಮುಕ್ತವನ್ನಾಗಿಸುವಲ್ಲಿ ಮನೆಮಠ, ತಮ್ಮ ಪ್ರಾಣವನ್ನು ಲೇಕಿಸದೆ ಹಗಲಿರುಳು ದುಡಿದ ರಾಯಬಾಗ ತಹಶೀಲ್ದಾರ್ ಚಂದ್ರಕಾಂತ ಭಜಂತ್ರಿ ಮತ್ತು ಸಿಬ್ಬಂದಿ, ಪೋಲಿಸ್ ಇಲಾಖೆಯ DYSP ವಿ.ಎಸ.ಗೀರಿಶ್. ಸಿಪಿಐ ಹಟ್ಟಿ, ಪಿಎಸೈ ಶಿವರಾಜ್ ಧರಿಗೌಡ ಹಾಗೂ ಸಿಬ್ಬಂದಿ, ಸಮುದಾಯ ಆರೋಗ್ಯಾಧಿಕಾರಿ ಡಾll ಸತೀಶ ಕಲ್ಲಟ್ಟಿ ಹಾಗೂ ಸಿಬ್ಬಂದಿ, ಪುರಸಭೆ ಮುಖ್ಯಾಧಿಕಾರಿ ಎಸ್ ಎ ಮಹಾಜನ, ಅವರ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರು, ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಾಯಕ ಹಾಗೂ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಶಿಕ್ಷಕರು ಹಾಗೂ ಮಾಧ್ಯಮದವರಿಗೆ ಕುಡಚಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮುಖಾಂತರ ಕುಡಚಿ ಪಟ್ಟಣದ ಜನರು ಕೊರೊನಾ ವಾರಿಯರ್ಸ್‌ಗಳ ಮೇಲೆ ಪುಷ್ಪ ಹಾರಿಸಿ ಭಾರತ ಮಾತಾಕೀ ಜೈ ಒಂದೆ ಮಾತರಂ ಎಂದು ಘೋಷಣೆಯೂಂದಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ಅಮೀನಾ ಪ್ಯಾಲೆಸ ಶಾದಿ ಮಹಲ್ ಒಳಾಂಗಣದಲ್ಲಿ ನಾಗರಿಕ ವೇದಿಕೆ ಕುಡಚಿ ಹಾಗೂ ಕುಡಚಿ ಸೌಂರಕ್ಷಣಾ ಕಮೀಟಿ ಸರ್ವ ಧರ್ಮ ಸಮಾನ ಇವರಿಂದ ಪರಮಾನಂದವಾಡಿಯ ಆಭಿನವ ಬ್ರಹ್ಮಾನಂದ ಸ್ವಾಮೀಜಿ ಹಾಗೂ ಮೌಲಾನಾ ಅವರ ಸಮ್ಮುಖದಲ್ಲಿ ಎಲ್ಲ ಕೊರೊನಾ ವಾರಿಯರ್ಸ್‌ಗಳಿಗೆ ಶಾಲು ಹೊದಿಸಿ ಹೂಮಾಲೆ ಹಾಕಿ ಸತ್ಕರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ,ಸಯೀದ್ ಅಹ್ಮದ್ ದೇಸಾಯಿ, ಡಾ. ಬಾಬಾಜಾನ ಚೆಮನಶೇಖ, ಅಮೀನ್ ವಾಟೆ, ಭೈಲೂಲ ರೆಡ್ಡಿ, ಸಲ್ಮಾನ ಡಂಗೆ, ರಾಜು ಗಸ್ತಿ, ಪರವೇಜ ವಾಟೆ, ಆಯೂಬ ಮೇವಗಾರ, ಮುಬಾರಕ್ ಓಮನೇ, ಮಿಜಾಬ ಚೆಮನಶೇಖ ಇತರರು ಉಪಸ್ಥಿತರಿದ್ದರು.