ರೈತನೋರ್ವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ
- 15 Jan 2024 , 1:45 AM
- Belagavi
- 188
ಬೆಳಗಾವಿ: ಕೊರೋನಾ ವೈರಸ್ ದಿಂದ ಹಾಗೂ ಮಳೆ ಯಿಂದ ಜಿಲ್ಲೆಯ ರೈತರು ಕಂಗೆಟ್ಟು ಹೋಗಿದ್ದಾರೆ ಸಾಲ ಮಾಡಿ ರೈತರುವ ತರಕಾರಿ ಹಾಗೂ ಇನ್ನಿತರ ಬೆಳೆಗಳನ್ನು ಬೆಳೆದಿದ್ದು ಆದರೆ ಕೊರೋನಾ ಮಾಹಾಮಾರಿಯಿಂದ ನಿಗದಿತ ಬೆಲೆ ರೈತರಿಗೆ ಸಿಕ್ಕಿಲ್ಲ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಮುಂದುವರೆದಿದೆ ತಾಲೂಕಿನಲ್ಲಿ ರೈತ ಸಮುದಾಯ ಒಬ್ಬರಾದ ಮೇಲೋಬ್ಬರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಕೃಷಿಯಲ್ಲಿ ತೀವ್ರ ನಷ್ಟ ಅನುಭವಿಸಿದ ಕಾರಣ ರೈತನೋರ್ವ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದುರ್ಘಟನೆ ಬೆಳಗಾವಿ ತಾಲೂಕಿನ ಕೇದನೂರ ಗ್ರಾಮದಲ್ಲಿ ನಡೆದಿದೆ. ಅಪ್ಪಯ್ಯಾ ನಾಗಪ್ಪಾ ರಾಜಾಯಿ (62) ಆತ್ಮಹತ್ಯೆಗೆ ಶರಣಾಗಿರುವ ಮೃತ ದುರ್ದೈವಿ ರೈತ.
5 ತಿಂಗಳ ಹಿಂದೆ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದ ಹೆಂಡತಿಗೆ ಶಸ್ತ್ರಚಿಕಿತ್ಸೆ ಮಾಡಿಸಿದ್ದರು. ನಂತರ ಹೊಲದಲ್ಲಿ ಕಷ್ಟಪಟ್ಟು ತರಕಾರಿ ಬೆಳೆದಿದ್ದರು. ಕೊರೊನಾದಿಂದಾಗಿ ಅದು ಮಾರಾಟ ಆಗದೆ ಹೊಲದಲ್ಲಿ ಕೊಳೆತು ಹೋಗಿತ್ತು. ಇಷ್ಟೇಲ್ಲಾ ಆದರು ಮತ್ತೆ ಈಗ ಹೊಲದಲ್ಲಿ ಆಲೂಗಡ್ಡೆ, ಸಬ್ಬಸಗಿ ಮತ್ತು ಕ್ಯಾಬಿಸ್ ಬೆಳೆ ಹಾಕಿದ್ದರು. ಆದರೆ ವಾರದ ಹಿಂದೆ ಸತತ ಸುರಿದ ಮಳೆಯಿಂದಾಗಿ ಮೂರು ಬೇಳೆ ಕೈ ಕೊಟ್ಟವು. ಇದರಿಂದ ಸತತ ಆರ್ಥಿಕವಾಗಿ ಹದೆಗಟ್ಟ ಪರಿಸ್ಥಿತಿಗೆ ಕಂಗೆಟ್ಟು ಹೊಲದಲ್ಲಿರುವ ಮಾವಿನ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಈ ಘಟನೆ ಕುರಿತು ಕಾಕತಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.