ಲಾಕ್ ಡೌನ್ ಇದೆ ವಾಹನ ತೊಗೊಂದ ಬಂದ್ರೆ ಹುಷಾರ್...

  • 30 Dec 2023 , 12:11 PM
  • Belagavi
  • 148

ಬೆಳಗಾವಿ : ನಗರದ ಪೋಷಕರು ತಮ್ಮ ತಮ್ಮ ಮಕ್ಕಳನ್ನು ರಸ್ತೆಗೆ ವಾಹನಗಳನ್ನು ತೆಗೆದಕೊಂಡು‌ ಬಂದರೆ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಅವರು‌‌‌ ಹೊರಗಡೆ ಬರದಂತೆ ನೋಡಿಕೊಳ್ಳಿ ಎಂದು ಡಿಸಿಪಿ ಡಾ. ವಿಕ್ರಮ್ ಅಮಟೆ ಹೇಳಿದರು. ಶನಿವಾರ ನಗರದ ಚನ್ನಮ್ಮ ವೃತ್ತದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಜಿಲ್ಲಾಧಿಕಾರಿ ಆದೇಶ ಮೇರೆಗೆ‌ ಕೊರೋನಾ ನಿಯಂತ್ರಣ ಮಾಡಲು ಎರಡು ದಿನಗಳ ಕಾಲ ಲಾಕ್ ಡೌನ್ ಘೋಷಣೆ ಮಾಡಿದ್ದಾರೆ.

ಅದನ್ನು ಯಶಸ್ವಿಯಾಗಿಸಲು ನಗರ ಪೊಲೀಸರು ಸನ್ನದ್ದರಾಗಿದ್ದಾರೆ. ಯಾರೂ ಅನಗತ್ಯವಾಗಿ ವಾಹನಗಳನ್ನು ರಸ್ತೆಗೆ ಬಂದರೆ ಅವುಗಳನ್ನು ಸೀಜ್ ಮಾಡಿ ಪ್ರಕರಣ ದಾಖಲಿಸಲಾಗುವುದು ಎಂದರು. ನಗರದಲ್ಲಿ ಎರಡು ದಿನಗಳ ಕಾಲ ಎಟಿಎಂ ತರಕಾರಿ ಸೇರಿದಂತೆ ಎಲ್ಲವೂ ಬಂದ್ ಇರುತ್ತದೆ. ಔಷಧಿ, ಆಸ್ಪತ್ರೆಗಳಿಗೆ, ನಿಗದಿಯಾದ ಮದುವೆಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಅನಗತ್ಯವಾಗಿ ರಸ್ತೆಗೆ ಬಂದರೆ ಅಂಥವರ ಮೇಲೆ ಕ್ರಮ ಜರುಗಿಸುವುದು ಖಚಿತ ಎಂದರು.

Read All News