ಬೆಳಗಾವಿ : ಬೆಳಗಾವಿಯಲ್ಲಿ ಜಿಲ್ಲಾಧಿಕಾರಿ ಘೋಷಣೆ ಮಾಡಿರುವ ಲಾಕ್ ಡೌನ್ ಮೊದಲ ದಿನ ಯಶಸ್ವಿಯಾಗಿದ್ದು ಭಾನುವಾರದ ಎರಡನೇ ದಿನದಲ್ಲಿ ಅನಗತ್ಯವಾಗಿ ವಾಹನಗಳನ್ನು ರಸ್ತೆಗೆ ಬಂದ ವಾಹನ ಸವಾರರು ಪೊಲೀಸರಿಗೆ ಪಿಳ್ಳೆ ನೆಪ ಹೇಳಿ ಪಾರಾಗಲು ಯತ್ನಿಸಿದ ಕಿಡಿಗೇಡಿಗಳಿಗೆ ನಗರ ಪೊಲೀಸರು ಬಿಸಿ ಮುಟ್ಟಿಸಿದರು.
ಅಗತ್ಯ ವಸ್ತುಗಳಾದ ಔಷಧಿ, ಹಾಲು ಖರೀದಿಗೆ ಮಾತ್ರ ಅವಕಾಶ ವಿದ್ದು ವಿನಾಕಾರಣ ರಸ್ತೆಗೆ ಬರುವ ವಾನಹನಗಳನ್ನು ಪೊಲೀಸರು ಸೀಜ್ ಮಾಡುತ್ತಿದ್ದಾರೆ. ನಗರದ ಚನ್ನಮ್ಮ ವೃತ್ತದಲ್ಲಿ ಡಿಸಿಸಿ ವಿಕ್ರಮ್ ಅಮಟೆ ಖುದ್ದು ಪರಿಶೀಲನೆ ನಡೆಸಿದ್ದಾರೆ.