ನಗರದ ಹತ್ತು ಕಡೆ ಅನ್ನದಾನ ಹಮ್ಮಿಕೊಳ್ಳಲಾಗುವುದು: ಶಾಸಕ ಬೆನಕೆ

  • 14 Jan 2024 , 11:29 PM
  • Belagavi
  • 215

ಬೆಳಗಾವಿ: ಕೋವಿಡ್ ಲಾಕ್ ಡೌನ್ ವೇಳೆ ಜನರು ಹಸಿವಿನಿಂದ ಬಳಲಬಾರದು. ಈ ನಿಟ್ಡಿನಲ್ಲಿ ಉತ್ತರ ಮತಕ್ಷೇತ್ರದ ಹತ್ತು ಪ್ರದೇಶದಲ್ಲಿ ಅನ್ನದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಶಾಸಕ ಅನಿಲ್ ಬೆನಕೆ ಹೇಳಿದರು. ಮಹಾಂತೇಶ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವ್ಯಾಕ್ಸಿನ್ ಸಮಸ್ಯೆ ಶೀಘ್ರದಲ್ಲೇ ಬಗೆಹರಿಯುತ್ತದೆ. ಮೊದಲ ಡೋಸ್ ಪಡೆದುಕೊಂಡವರಿಗೆ ಎರಡನೇ ಡೋಸ್ ಲಭ್ಯವಿದೆ. ಎಲ್ಲರಿಗೂ ಅನಕೂಲವಾಗುವ ನಿಟ್ಟಿನಲ್ಲಿ ರಾಜ್ಯ ಸರಕಾರ ವ್ಯಾಕ್ಸಿನ್ ಖರೀದಿ ಮಾಡಲು ಮುಂದಾಗಿದ್ದು ಶೀಘ್ರದಲ್ಲೇ ಎಲ್ಲರಿಗೂ ವ್ಯಾಕ್ಸಿನ್ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕನೇರಿ ಮಠದ ಶ್ರೀಗಳು ಹೋಮಿಯೋಪತಿ ಔಷಧಿಯನ್ನು ಸಿದ್ದಪಡಿಸಿದ್ದಾರೆ.

ಅವರ ಸಲಹೆ ಮೇರೆಗೆ ಜನರಿಗೆ ಔಷಧಿ ವಿತರಿಸಲಾಗುತ್ತದೆ. ಆದರೆ ಇದು ಕೊರೋನಾ ವಾಸಿಗೆ ಇದ್ದು ಮದ್ದಲ್ಲ. ಆದರೆ ಕೊರೋನಾ ಲಕ್ಷ್ಮಣಗಳನ್ನು ಕಡಿಮೆ ಮಾಡುತ್ತದೆ.

ಇದು ಮಹಾರಾಷ್ಟ್ರದಲ್ಲಿಯೂ ಉತ್ತಮ ಫಲಿತಾಂಶ ನೀಡಿದೆ. ಈ ನಿಟ್ಟಿನಲ್ಲಿ ಉತ್ತರ ಮತಕ್ಷೇತ್ರದ ಜನರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಐದು ಸಾವಿರ ಔಷಧಿ‌ ಸಿದ್ದಪಡಿಸಲಾಗಿದೆ ಎಂದರು.

Read All News