ನವದೆಹಲಿ: ರೈತರ ಪ್ರತಿಭಟನೆಯನ್ನು ಗುರುತಿಸಿ ಕಾಂಗ್ರೆಸ್,ಜೆ ಡಿ ಎಸ್, ಎಸ್‌ಪಿ, ಎನ್‌ಸಿಪಿ ಮತ್ತು ಡಿಎಂಕೆ ಸೇರಿದಂತೆ ಹನ್ನೆರಡು ಪ್ರಮುಖ ವಿರೋಧ ಪಕ್ಷಗಳು ಮೇ 26 ರಂದು ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಸಂಯುಕ್ತ ಕಿಸಾನ್ ಮೋರ್ಚಾ(SKM) ನೀಡಿದ ದೇಶಾದ್ಯಂತ ಪ್ರತಿಭಟನಾ ಕರೆಗೆ ಬೆಂಬಲ ನೀಡಿವೆ.
ಕೇಂದ್ರ ಸರ್ಕಾರ ತಂದ ಮೂರು ಕೃಷಿ ಕಾನೂನುಗಳ ವಿರುದ್ಧ ದೇಶದ ವಿವಿಧ ಭಾಗಗಳ ರೈತರು ದೆಹಲಿ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಶಾಸನಗಳು ಕೃಷಿಗೆ ಅಡ್ಡಿಯಾಗುತ್ತವೆ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಸೋನಿಯಾ ಗಾಂಧಿ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ(ಜೆಡಿ-ಎಸ್),ಸೋನಿಯಾ ಗಾಂಧಿ (ಐಎನ್‌ಸಿ),ಶರದ್ ಪವಾರ್ (ಎನ್‌ಸಿಪಿ),ಮಮತಾ ಬ್ಯಾನರ್ಜಿ (ಟಿಎಂಸಿ),ಉದ್ಧವ್ ಠಾಕ್ರೆ (ಎಸ್‌ಎಸ್),ಎಂ.ಕೆ.ಸ್ಟಾಲಿನ್ (ಡಿಎಂಕೆ),ಹೇಮಂತ್ ಸೊರೆನ್ (ಜೆಎಂಎಂ),ಫಾರೂಕ್ ಅಬ್ದುಲ್ಲಾ (ಜೆಕೆಪಿಎ),ಅಖಿಲೇಶ್ ಯಾದವ್, ಎಸ್ಪಿ (ಆರ್ಜೆಡಿ),ಡಿ ರಾಜ (ಸಿಪಿಐ),ಸೀತಾರಾಮ್ ಯೆಚೂರಿ (ಸಿಪಿಐ-ಎಂ) ಕೇಂದ್ರವು ತಕ್ಷಣವೆ ರೈತ ಮುಖಂಡರೊಂದಿಗೆ ಮಾತುಕತೆ ಪುನರಾರಂಭಿಸಬೇಕು ಮತ್ತು ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.