ಬೆಳಗಾವಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ವಂಟಮೂರಿ ಕಾಲೋನಿಯಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟ (ರಿ) ಬೆಳಗಾವಿ ಜಿಲ್ಲಾ ಘಟಕ ಮತ್ತು ಸುರೇಶ ಯಾದವ ಫೌಂಡೆಶನ್ ಸಂಯೋಜನೆಯಲ್ಲಿ ಹಲವಾರು ವಿಕಲಚೇತನರಿಗೆ ಕೋವಿಡ್-19 ರ ಲಸಿಕೆ ಹಾಕಿಸಲಾಯಿತು.
ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀ ಮಹಾಂತೇಶ ಹೊಂಗಲ, ಪ್ರಧಾನ ಕಾರ್ಯದರ್ಶಿ ಶ್ರೀ ಸುರಜ್ ಧಾಮಣೆಕರ, ಸುರೇಶ ಯಾದವ ಫೌಂಡೇಶನ್ ಸಂಸ್ಥಾಪಕರು ಮತ್ತು ಸಮಾಜ ಸೇವಕರಾದ ಶ್ರೀ, ಸುರೇಶ ಯಾದವ ಸರ್, ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು,