ದೆಹಲಿ: ಮಾಹಿತಿ ತಂತ್ರಜ್ಞಾನ (ಐಟಿ)ಜರುಗಿಸಿದ ಹೊಸ ಐಟಿ ನಿಯಮಗಳನ್ನು ಜಾರಿಗೊಳಿಸುವುದನ್ನು ತಡೆಯುವ ಪ್ರಯತ್ನದಲ್ಲಿ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಭಾರತ ಸರ್ಕಾರದ ವಿರುದ್ಧ ದೂರು ದಾಖಲಿಸಿದೆ ಎಂದು ವರದಿಯಾಗಿದೆ.
ಈ ನಿಯಮಗಳು ಬುಧವಾರದಿಂದ ಜಾರಿಗೆ ಬರುತ್ತವೆ ಮತ್ತು ಫೇಸ್‌ಬುಕ್ ಒಡೆತನದ ವಾಟ್ಸಾಪ್ ಈ ಹೊಸ ನಿಯಮಗಳು ಅದರ ಬಳಕೆದಾರರ ಎನ್ಕ್ರಿಪ್ಶನ್ ಅಥವಾ ಗೌಪ್ಯತೆಯ ರಕ್ಷನೆಗೆ ದಕ್ಕೆ ಉಂಟು ಮಾಡುತ್ತದೆ ಎಂದು ವಾಟ್ಸಾಪ್ ಹೇಳಿಕೊಂಡಿದೆ.