ರಾಮದುರ್ಗ:ಜಿಲ್ಲೆಯಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿದ್ದರೂ ಸಾರಿಗೆ ನೌಕರರು ಸಾಮಾಜಿಕ ಅಂತರ ಮರೆತು ವ್ಯಾಕ್ಸಿನ್ ಹಾಕಿಸಿಕೊಂಡ ಘಟನೆ ರಾಮದುರ್ಗದ ಸಾರಿಗೆ ಡಿಪೋದಲ್ಲಿ ನಡೆದಿದೆ.
ಸಾರಿಗೆ ನೌಕರರಿಗೆ ವ್ಯಾಕ್ಸಿನ್ ನೀಡುತ್ತಿರುವ ಹಿನ್ನೆಲೆ. ಸಾಮಾಜಿಕ ಅಂತರ ಮರೆತು ವ್ಯಾಕ್ಸಿನ್ ಪಡೆಯಲು ಮುಂದಾದ ಸಾರಿಗೆ ನೌಕರರು,ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ನಡೆದ ಘಟನೆ ಇದಾಗಿದೆ.
ರಾಮದುರ್ಗ ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯಲಿ ನಡೆಯುತ್ತಿರುವ ವ್ಯಾಕ್ಸಿನೆಷನ್ ಮಾಡುತ್ತಿದ್ದಾರೆ.ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಕ್ಸಿನ್ ಪಡೆಯುತ್ತಿರುವ ಸಾರಿಗೆ ನೌಕರರು.
ಅನಕ್ಷರಸ್ತರಿಗೆ ಕೋವಿಡ್ ಜಾಗೃತಿ ಮೂಡಿಸುವ ಸರ್ಕಾರ ಮುಂದೆ ನಿಂತು ಕೋವಿಡ್ ರೂಲ್ಸ್ ಬ್ರೇಕ್ ಮಾಡಲಾಗಿದೆ. ಗುಂಪಾಗಿ ಸೇರಿರುವ ಜನರಲ್ಲಿ ಒಬ್ಬರಿಗೆ ಸೋಂಕು ಇದ್ರೂ ಎಲ್ಲರಿಗೂ ಹರಡುವ ಸಾಧ್ಯತೆ ದಟ್ಟವಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಹೇಳಬೆಕಾಗಿದ್ದ ಅಧಿಕಾರಿಗಳೇ ಮಾಯಾ ಎನ್ನುವ ಪ್ರಶ್ನೆ ಉದ್ಭವವಾಗಿದೆ.
ರಾಮದುರ್ಗ ಸಾರಿಗೆ ಘಟಕ ವಿಭಾಗದ 379 ಸಿಬ್ಬಂದಿಗೆ ವ್ಯಾಕ್ಸಿನ್ ನೀಡುವ ವೇಳೆ ನಡೆದ ಘಟನೆ, ಇದುವರೆಗೆ 50 ಜನಕ್ಕೆ ವ್ಯಾಕ್ಸಿನ್ ನೀಡಲಾಗಿದೆ, ನಿನ್ನೆ ದಿನ ಹೆಸ್ಕಾಂ ಸಿಬ್ಬಂದಿಗೆ ವ್ಯಾಕ್ಸಿನ್ ನೀಡಿದ್ದರು, ನಿನ್ನೆಯೂ ಸಾಮಾಜಿಕ ಅಂತರ ಮರೆತು ವ್ಯಾಕ್ಸಿನ್ ನೀಡಿರುವ ಶಂಕೆ ವ್ಯಕ್ತವಾಗಿದೆ. ಸಾಮಾಜಿಕ ಅಂತರ ಕಾಪಾಡಿ ಎಂದು ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ.